alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಭಾಷಣದಲ್ಲಿ ಹೇಳಿದ ಹೂವಿನ ವಿಶೇಷವೇನು ಗೊತ್ತಾ?

72ನೇ ಸ್ವಾತಂತ್ರ್ಯ ದಿನಾಚರಣೆ ಭಾಷಣದ ವೇಳೆ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದು ಹೂವಿನ ಬಗ್ಗೆ ಪ್ರಸ್ತಾವನೆ ಮಾಡಿದ್ದಾರೆ. ಆ ಹೂವಿನ ಹೆಸ್ರು ನೀಲಕುರಿಂಜಿ. ಕೇರಳದ ನೀಲಗಿರಿ ಬೆಟ್ಟಗಳಲ್ಲಿ ಈ ಹೂವು 12 ವರ್ಷಗಳಿಗೊಮ್ಮೆ ಅರಳುತ್ತದೆ.

ನೀಲಿ ಬಣ್ಣದ ನೀಲಕುರಿಂಜಿ ಹೂವು ನೋಡಲು ಸುಂದರವಾಗಿರುತ್ತದೆ. ಈ ಹೂವು 2006ರಲ್ಲಿ ಅರಳಿತ್ತು. ನೀಲಕುರಿಂಜಿ ಹೂವು ಆಗಸ್ಟ್ ಹಾಗೂ ಸೆಪ್ಟೆಂಬರ್ ಮಧ್ಯೆ ಅರಳುತ್ತದೆ. ಮುನ್ನಾರಿನ ಬೆಟ್ಟಗಳ ಸೌಂದರ್ಯವನ್ನು ನೀಲಕುರಿಂಜಿ ಹೂ ಹೆಚ್ಚಿಸುತ್ತದೆ. ಇನ್ನು 2030ರಲ್ಲಿ ಈ ಹೂ ಮತ್ತೆ ಅರಳಲಿದೆ.

12 ವರ್ಷಗಳ ಕಾಲ ಈ ಸೌಂದರ್ಯ ಸವಿಯಲು ಕಾಯಲೇಬೇಕು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವತ್ತು ಈ ಹೂವಿನ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ್ದಾರೆ. ನಮ್ಮ ದೇಶದಲ್ಲಿ 12 ವರ್ಷಕ್ಕೊಮ್ಮೆ ಅರಳುವ ಹೂವಿದೆ. ಅದು ಈ ಬಾರಿ ರಾಷ್ಟ್ರಧ್ವಜದ ಅಶೋಕ ಚಕ್ರದಲ್ಲಿ ಅರಳಿದೆ ಎಂದು ಮೋದಿ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...