alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶದ ಅತಿ ಉದ್ದದ ಸೇತುವೆ ಲೋಕಾರ್ಪಣೆ

inaugurate-620x413ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ 3 ವರ್ಷ ಪೂರೈಸಿದ ಸಂಭ್ರಮದಲ್ಲಿದೆ. ಇದೇ ಸಂಭ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಸ್ಸಾಂಗೆ ತೆರಳಿದ್ದಾರೆ. ಭಾರತದ ಅತಿ ಉದ್ದದ ಸೇತುವೆಯನ್ನು ಮೋದಿ ಉದ್ಘಾಟಿಸಿದ್ದಾರೆ. ಇದ್ರ ಜೊತೆಗೆ ಏಮ್ಸ್ ಆಸ್ಪತ್ರೆ ಸೇರಿದಂತೆ ಅನೇಕ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಬ್ರಹ್ಮಪುತ್ರ ಉಪ ನದಿಯಾದ ಲೋಹಿತ್ ನದಿಗೆ ಅಡ್ಡಲಾಗಿ ಢೋಲಾ-ಸದಿಯಾ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಸದಿಯಾದಿಂದ 540 ಕಿಮೀ ದೂರದಲ್ಲಿ ಗುವಾಹಟಿಯಿದ್ದು, ಢೋಲಾದಿಂದ 300 ಕಿಮೀ ಅಂತರದಲ್ಲಿ ಇಟಾ ನಗರವಿದೆ. ಈ ಸೇತುವೆಯ ಉದ್ದ 9.2 ಕಿಮೀ. ಬಾಂದ್ರಾ-ವರ್ಲಿ ಸೀಲಿಂಕ್ ಗಿಂತ್ಲೂ ಶೇ.30 ರಷ್ಟು ಅಧಿಕ ಉದ್ದವಾಗಿದೆ. ಈ ಸೇತುವೆ ಲೋಕಾರ್ಪಣೆಯಾಗಿದ್ದು, ಆಸ್ಸಾಂ ಮತ್ತು ಅರುಣಾಚಲಪ್ರದೇಶ ನಡುವಣ ಪ್ರಯಾಣದ ಅವಧಿ 4 ಗಂಟೆಗಳಷ್ಟು ಕಡಿಮೆಯಾಗಲಿದೆ.

ಸೇನೆಗೆ ಈ ಬ್ರಿಡ್ಜ್ ನಿಂದ ಸಾಕಷ್ಟು ಪ್ರಯೋಜನವಾಗಲಿದೆ. ಚೀನಾ ಗಡಿಯಲ್ಲಿರುವ ಅರುಣಾಚಲಪ್ರದೇಶಕ್ಕೆ ಯೋಧರು ಅತ್ಯಂತ ಶೀಘ್ರವಾಗಿ ತಲುಪಬಹುದು. 2011ರಲ್ಲಿ ಈ ಸೇತುವೆಯ ನಿರ್ಮಾಣ ಕಾರ್ಯ ಶುರುವಾಗಿತ್ತು. ಈ ಯೋಜನೆಗೆ 950 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. 2015ರಲ್ಲಿ ಕೇಂದ್ರ ಸರ್ಕಾರ ಈ ಯೋಜನೆಗಾಗಿ 15,000 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...