alex Certify
ಕನ್ನಡ ದುನಿಯಾ       Mobile App
       

Kannada Duniya

“ಜಿಎಸ್ ಟಿ ಬದಲಾವಣೆಯಿಂದ 15 ದಿನ ಮೊದಲೇ ದೀಪಾವಳಿ ಬಂದಿದೆ’’

ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡು ದಿನಗಳ ಗುಜರಾತ್ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಳಿಗ್ಗೆ ಜಾಮ್ನಗರಕ್ಕೆ ತೆರಳಿದ ಮೋದಿಗೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಸ್ವಾಗತ ಕೋರಿದ್ರು. ಇದ್ರ ನಂತ್ರ ದ್ವಾರಕಕ್ಕೆ ಹೋದ ಮೋದಿ ದ್ವಾರಕಾದೀಶನ ದರ್ಶನ ಪಡೆದ್ರು.

ನಂತ್ರ ನರೇಂದ್ರ ಮೋದಿ ಓಖ ಮತ್ತು ಬೆಟ್ ದ್ವಾರಕ ನಡುವಿನ ಸೇತುವೆ ನಿರ್ಮಾಣಕ್ಕೆ ಶಿಲನ್ಯಾಸ ನೆರವೇರಿಸಿದ್ರು. ಇಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಮೋದಿ ಆರ್ಥಿಕ ಅಭಿವೃದ್ಧಿ, ರೈತರ ಬಗ್ಗೆ ಮಾತನಾಡಿದ್ದಾರೆ. ಜಿಎಸ್ ಟಿಯಲ್ಲಿ ಈಗ ಸಾಕಷ್ಟು ಬದಲಾವಣೆ ತಂದಿದ್ದು, 15 ದಿನಗಳ ಮೊದಲೇ ಜನರು ದೀಪಾವಳಿ ಆಚರಿಸುತ್ತಿದ್ದಾರೆ. ಜಿಎಸ್ ಟಿಯಿಂದ ಜನರು ತೊಂದರೆ ಪಡಬಾರದು. ಹಾಗಾಗಿ ಈ ಬಗ್ಗೆ ಚರ್ಚೆ ನಡೆಸಿ ಸರಳ ತೆರಿಗೆಯನ್ನು ಮತ್ತಷ್ಟು ಸರಳ ಮಾಡಿದ್ದೇವೆ. ಜಿಎಸ್ ಟಿ ಜಾರಿಗೆ ಬಂದ ನಂತ್ರ ಮೂರು ತಿಂಗಳ ಅಧ್ಯಯನ ನಡೆಸಿ ಮತ್ತೆ ಬದಲಾವಣೆ ತರುವುದಾಗಿ ಹೇಳಿದ್ದೆವು. ಅದರಂತೆ ನಡೆದುಕೊಂಡಿದ್ದೇವೆಂದು ಮೋದಿ ಹೇಳಿದ್ದಾರೆ.

ದೇಶದ ರೈತರ ಆದಾಯ ವೃದ್ಧಿಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮೋದಿ ತಿಳಿಸಿದ್ದಾರೆ. ಮೀನುಗಾರರ ಜೀವನ ಸುಧಾರಣೆಗೆ ಕ್ರಮಕೈಗೊಳ್ಳುತ್ತಿರುವುದಾಗಿಯೂ ಮೋದಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...