alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಾಲಯದ ಆವರಣದಲ್ಲೇ ಅರ್ಚಕನ ಹತ್ಯೆ

covered-dead-bodyಅರ್ಚಕರೊಬ್ಬರನ್ನು ದೇವಾಲಯದ ಆವರಣದಲ್ಲೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಪಟ್ಟಣದಲ್ಲಿ ನಡೆದಿದೆ. ಹತ್ಯೆಗೀಡಾದ ಅರ್ಚಕ ದೇವಾಲಯದ ಆವರಣದಲ್ಲೇ ತಂಗಿದ್ದು, ಇಂದು ಬೆಳಿಗ್ಗೆ ಪೂಜೆಗೆ ತೆರಳಿದ್ದವರು ಆರ್ಚಕನ ಶವ ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

55 ವರ್ಷದ ಪ್ರಸನ್ನ ದಾಸ್ ಹತ್ಯೆಯಾದ ಅರ್ಚಕನಾಗಿದ್ದು, ಶವದ ಬಳಿ ಹರಿತವಾದ ಆಯುಧ ಬಿದ್ದಿರುವುದು ಕಂಡು ಬಂದಿದೆ. ಕಳೆದ ರಾತ್ರಿ ಈ ಹತ್ಯೆಯಾಗಿರಬಹುದೆಂದು ಶಂಕಿಸಲಾಗಿದ್ದು, ಯಾವ ಕಾರಣಕ್ಕಾಗಿ ಈ ಕೃತ್ಯ ನಡೆದಿರಬಹುದೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದೇವಸ್ಥಾನದ ಹುಂಡಿ ಹಣ ಕಳುವು ಮಾಡಿಲ್ಲವೆಂದು ಹೇಳಲಾಗುತ್ತಿದ್ದು, ವೈಯಕ್ತಿಕ ಕಾರಣಗಳಿಗಾಗಿ ಈ ಕೃತ್ಯ ನಡೆದಿರಬಹುದೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಇಂಗ್ಲೀಷ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...