alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀಕೃಷ್ಣನ ಹೆಸರಲ್ಲಿ ರೇಷನ್ ಕಾರ್ಡ್

download

ರಾಜಸ್ಥಾನದಲ್ಲಿ ಭಗವಂತ ಶ್ರೀಕೃಷ್ಣ ಹೆಸರಿನಲ್ಲಿ ರೇಷನ್ ಕಾರ್ಡ್ ಮಾಡಿಸಲಾಗಿದೆ. ಈ ಕಾರ್ಡ್ ನಲ್ಲಿಯೇ ಕಳೆದ 40 ವರ್ಷಗಳಿಂದ ರೇಷನ್ ಪಡೆಯಲಾಗ್ತಾ ಇದೆ. ಬೆರಳಚ್ಚು ಕಡ್ಡಾಯ ಮಾಡಿದ ನಂತ್ರ ಈ ಮೋಸ ಬೆಳಕಿಗೆ ಬಂದಿದೆ.

ಬರನ್ ಜಿಲ್ಲೆಯಲ್ಲಿ ಮುರಳಿ ಮನೋಹರ್ ಎಂಬ ಹೆಸರಿನಲ್ಲಿ ರೇಷನ್ ಕಾರ್ಡ್ ಮಾಡಿಸಲಾಗಿದೆ. ವಯಸ್ಸು 70 ಎಂದು ತೋರಿಸಲಾಗಿದೆ. ಪತ್ನಿ ಹೆಸರು ಠಾಕೂರಾಣಿ. 65 ವರ್ಷ. ಮಗಳು ತುಳಸಿ. ಮನೆಯ ನಾಲ್ಕನೆ ಸದಸ್ಯನ ಹೆಸರು ಗಣೇಶ ಎಂದು ಬರೆಯಲಾಗಿದೆ. ಐದನೇ ಸದಸ್ಯನ ಹೆಸರು ಬಾಬುಲಾಲ್. ದೇವಸ್ಥಾನವೊಂದರ ಪೂಜಾರಿ. ಈತನೇ ಈ ರೇಷನ್ ಕಾರ್ಡ್ ಮಾಡಿಸಿ, ಕಳೆದ 40 ವರ್ಷಗಳಿಂದ ಪಡಿತರ ಆಹಾರ ಪಡೆಯುತ್ತಿರುವ ವ್ಯಕ್ತಿ.

ರೇಷನ್ ಕಾರ್ಡ್ ನಲ್ಲಿ ಹೆಸರಿರುವ ವ್ಯಕ್ತಿಗಳ ಬೆರಳಚ್ಚು ಬೇಕೆಂಬ ನಿಯಮ ಜಾರಿಯಾದ ಮೇಲೆ ಈ ಪೂಜಾರಿಯ ವಂಚನೆ ಹೊರಗೆ ಬಿದ್ದಿದೆ. ರೇಷನ್ ಕಾರ್ಡ್ ನಲ್ಲಿರುವವರನ್ನೆಲ್ಲ ಕೇಂದ್ರಕ್ಕೆ ಕರೆತರುವಂತೆ ಸಿಬ್ಬಂದಿ ಸೂಚನೆ ನೀಡಿದ್ದಾರೆ. ಇದಕ್ಕೆ ಪೂಜಾರಿ ವಿರೋಧ ವ್ಯಕ್ತಪಡಿಸಿದ್ದು, ಸಿಬ್ಬಂದಿ ಕಿರಿಕಿರಿ ನೀಡ್ತಿದ್ದಾರೆಂದು  ಆಹಾರ ಇಲಾಖೆಗೆ ದೂರು ನೀಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿದಾಗ ಸತ್ಯ ಹೊರಬಿದ್ದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...