alex Certify
ಕನ್ನಡ ದುನಿಯಾ       Mobile App
       

Kannada Duniya

‘ಕಿಡ್ನಾಪ್’ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ ಬಿಜೆಪಿ ಶಾಸಕ

ಟ್ವಿಟರ್‌ನಲ್ಲಿ ಒಂದು ವಿಡಿಯೋ ಮೂಲಕ ಹಾಗೂ ಇನ್ನೊಂದು ಲಿಖಿತವಾಗಿ ಹೀಗೆ ಎರಡು ಕ್ಷಮಾಪಣಾ ಹೇಳಿಕೆ ನೀಡಿದಾಗ್ಯೂ, ಬಿಜೆಪಿ ಶಾಸಕ ರಾಮ್ ಕದಂಗೆ ಸಂಘ ಪರಿವಾರದಲ್ಲಿ ತೀರಾ ಬೆಂಬಲ ದೊರೆತಂತೆ ಕಾಣುತ್ತಿಲ್ಲ.

ಕೆಲ ದಿನಗಳ ಹಿಂದೆ ವೈರಲ್ ಆದ ವಿಡಿಯೋ ಒಂದರಲ್ಲಿ, ಮಹಾರಾಷ್ಟ್ರದ ಘಾಟ್‌ಕೋಪರ್‌ನಲ್ಲಿ ನಡೆದ ದಹಿ ಹಂಡಿ ಕಾರ್ಯಕ್ರಮದ ವೇಳೆ ಯುವಕರ ಗುಂಪೊಂದಕ್ಕೆ, ನಿಮ್ಮ ಪ್ರಪೋಸಲ್‌ಗೆ ಹುಡುಗಿ ಒಪ್ಪದಿದ್ದರೆ ಆ ಹುಡುಗಿಯನ್ನು ಅಪಹರಿಸುವಂತೆ ಶಾಸಕ ಕದಂ ಹೇಳುತ್ತಿರುವುದು ಕಂಡುಬಂದಿತ್ತು.

ಬಾಲಕಿಯನ್ನು ಕಿಡ್ನಾಪ್ ಮಾಡುವಂತೆ ಶಾಸಕ ಕದಂ ಹೇಳಿದ ಮಾತಿನಿಂದ ಬಹುತೇಕ ಮಹಿಳಾ ನಾಯಕರ ಸಹಿತ ಬಿಜೆಪಿ ಪ್ರಮುಖರು ಅಂತರ ಕಾಯ್ದುಕೊಂಡಿದ್ದರು. ಈತನ ಮತ ಕ್ಷೇತ್ರವಾದ ಘಾಟ್‌ಕೋಪರ್‌ನಲ್ಲಿ ಬಿಜೆಪಿಯ ವಿದ್ಯಾರ್ಥಿ ಘಟಕವಾದ ಎಬಿವಿಪಿ, ಶಾಸಕನ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿತ್ತು.

ಕದಂ ಹೇಳಿಕೆ ಕೇಳಿ ನನಗೆ ಆಘಾತವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರೆ ಶೇನ್ ಎನ್‌.ಸಿ. ಹೇಳಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕದಂ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಬಿವಿಪಿಯ ಮುಂಬೈ ಘಟಕದ ಸ್ವಾತಿ ಚೌಧರಿ ಆಗ್ರಹಿಸಿದ್ದಾರೆ. ಕದಂ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯತೆ ಇದೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...