alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರಪತಿಯಾಗಿ ರಾಮ್ನಾಥ್ ಕೋವಿಂದ್ ಗೆಲುವು ನಿಶ್ಚಿತ

ram-nath-kovind-meira-kumar

14ನೇ ರಾಷ್ಟ್ರತಿ ಆಯ್ಕೆಗೆ ಮತದಾನ ಶುರುವಾಗಿದೆ. ಎನ್ ಡಿ ಎ ಯಿಂದ ರಾಮ್ನಾಥ್ ಕೋವಿಂದ್ ಕಣದಲ್ಲಿದ್ದರೆ ವಿರೋಧ ಪಕ್ಷ ಮೀರಾ ಕುಮಾರ್ ರನ್ನು ಕಣಕ್ಕಿಳಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಮುರಳಿ ಮನೋಹರ ಜೋಷಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಬಿಎಸ್ಪಿ ನಾಯಕಿ ಮಾಯಾವತಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಎಲ್ಲ ನಾಯಕರು ಮತದಾನ ಮಾಡ್ತಿದ್ದಾರೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎಗೆ ಭಾರೀ ಮುಖಭಂಗವಾಗಿದೆ. ಎನ್ ಸಿ ಪಿ ಯುಪಿಎ ಕೈಬಿಟ್ಟು ಎನ್ ಡಿ ಎ ಗೆ ಬೆಂಬಲ ನೀಡಿದೆ. ಶರದ್ ಪವರ್, ರಾಮ್ನಾಥ್ ಕೋವಿಂದ್ ಅವರಿಗೆ ಬೆಂಬಲ ನೀಡಿದ್ದಾರೆ. ಹಾಗೆ ತೃಣಮೂಲ ಕಾಂಗ್ರೆಸ್ ನಿಂದ  ಅಡ್ಡ ಮತದಾನ ಬಿದ್ದಿದೆ ಎನ್ನಲಾಗ್ತಾ ಇದೆ.

ಬೆಳಿಗ್ಗೆ 10 ಗಂಟೆಗೆ ಮತದಾನ ಶುರುವಾಗಿದ್ದು ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಶಾಸಕರು, ಸಂಸದರು ಸೇರಿದಂತೆ 4896 ಮಂದಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಸಂಸತ್ ಭವನ ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲಿ ಮತದಾನ ನಡೆಯುತ್ತಿದೆ. ಮತದಾನ ಆರಂಭಕ್ಕೆ 10 ನಿಮಿಷ ಮೊದಲೇ ಬಂದ ನರೇಂದ್ರ ಮೋದಿ ಮತಗಟ್ಟೆ ಪರಿಶೀಲನೆ ನಡೆಸಿದ್ದಾರೆ. ಆರಂಭಕ್ಕಿಂತ ಮೊದಲು ಬರುವುದು ನನ್ನ ಅಭ್ಯಾಸ ಎಂದು ಸಿಬ್ಬಂದಿ ಬಳಿ ಹೇಳಿದ್ದಾರೆ ಮೋದಿ.

ಜುಲೈ 20ರಂದು ಮತ ಎಣಿಕೆ ನಡೆಯಲಿದ್ದು, ರಾಷ್ಟ್ರಪತಿ ಯಾರೆಂಬುದು ಸ್ಪಷ್ಟವಾಗಲಿದೆ. ಆದ್ರೆ ಈಗಾಗ್ಲೇ ಗೆಲುವು ನಮ್ಮದು ಎಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೂತನ ರಾಷ್ಟ್ರಪತಿ ರಾಮ್ನಾಥ್ ಅವರಿಗೆ ಶುಭಕೋರಿದ್ದಾರೆ. ಈಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಡಳಿತ ಜುಲೈ 24ಕ್ಕೆ ಮುಕ್ತಾಯವಾಗಲಿದೆ. ಜುಲೈ 25ರಂದು ಹೊಸ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...