alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರಪತಿ ಆಯ್ಕೆಗೆ ಇಂದು ಮತದಾನ

rastrpti

ನವದೆಹಲಿ: ದೇಶದ 14 ನೇ ರಾಷ್ಟ್ರಪತಿ ಆಯ್ಕೆಗೆ ಇಂದು ಮತದಾನ ನಡೆಯಲಿದ್ದು, ಎನ್.ಡಿ.ಎ. ಅಭ್ಯರ್ಥಿಯಾಗಿ ರಾಮನಾಥ್ ಕೋವಿಂದ್, ಯು.ಪಿ.ಎ. ಅಭ್ಯರ್ಥಿಯಾಗಿ ಮೀರಾ ಕುಮಾರ್ ಸ್ಪರ್ಧಿಸಿದ್ದಾರೆ.

748 ಸಂಸದರು, 4104 ಶಾಸಕರು ಮತ ಚಲಾವಣೆ ಮಾಡಲಿದ್ದಾರೆ. ಒಟ್ಟು ಮತ ಮೌಲ್ಯ 10,98,882 ಆಗಿದ್ದು, 5,49,442 ಮ್ಯಾಜಿಕ್ ನಂಬರ್ ಪಡೆದವರು ಆಯ್ಕೆಯಾಗಲಿದ್ದಾರೆ.

ಎನ್.ಡಿ.ಎ. ಮತಮೌಲ್ಯ 5,27,371 ಆಗಿದ್ದು, ಯು.ಪಿ.ಎ. ಮತಮೌಲ್ಯ 1,73,849 ಆಗಿದೆ. ಶೇ. 60.30 ರಷ್ಟು ಬೆಂಬಲ ಹೊಂದಿರುವ ರಾಮನಾಥ್ ಕೋವಿಂದ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ದೇಶಾದ್ಯಂತ 30 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಜುಲೈ 20 ರಂದು ಮತ ಎಣಿಕೆ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...