alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರಪತಿ ಮುಂದೆ ದರ್ಪ ತೋರಿದ ಪುರಿ ಜಗನ್ನಾಥ ದೇವಾಲಯ ಸಿಬ್ಬಂದಿ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಅವ್ರ ಪತ್ನಿ ಸವಿತಾ ಕೋವಿಂದ್ ಗೆ ಅವಮಾನ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಒರಿಸ್ಸಾದ ಪ್ರಸಿದ್ಧ ಪುರಿ ಜಗನ್ನಾಥ ದೇವಸ್ಥಾನದಲ್ಲಿ ಸೇವಕರು ರಾಷ್ಟ್ರಪತಿ ಹಾಗೂ ಅವ್ರ ಪತ್ನಿ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಘಟನೆ ಮೇ 18 ರಂದೇ ನಡೆದಿದೆ. ಆದ್ರೆ ಈಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಜಿಲ್ಲಾಡಳಿತ ತನಿಖೆಗೆ ಆದೇಶ ನೀಡಿದೆ.

ಗರ್ಭಗುಡಿ ಸಮೀಪ ಹೋಗ್ತಿದ್ದ ರಾಷ್ಟ್ರತಿಗಳನ್ನು ದೇವಸ್ಥಾನದ ಸೇವಕರು ತಡೆದಿದ್ದಾರೆ. ಸವಿತಾ ಕೋವಿಂದ್ ರನ್ನು ತಳ್ಳಿದ್ದಾರಂತೆ. ರಾಷ್ಟ್ರಪತಿ ಭವನ ಘಟನೆ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಗೆ ಒಂದು ನೊಟೀಸ್ ಜಾರಿ ಮಾಡಿತ್ತು. ನೊಟೀಸ್ ತಲುಪಿದ ನಂತ್ರ ದೇವಸ್ಥಾನದ ಆಡಳಿತ ಮಂಡಳಿ ಸಭೆ ನಡೆಸಿದೆ.

ರಾಷ್ಟ್ರಪತಿ ಹಾಗೂ ಅವ್ರ ಪತ್ನಿಗೆ ದೇವರ ದರ್ಶನ ಸರಿಯಾಗಿ ಆಗ್ಲಿ ಎನ್ನುವ ಕಾರಣಕ್ಕೆ ಬೆಳಿಗ್ಗೆ 6.30 ರಿಂದ 8.45 ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಕೆಲ ವಿಶೇಷ ಭಕ್ತರು ಹಾಗೂ ಸ್ಥಳೀಯ ಮುಖಂಡರಿಗೂ ಅವಕಾಶ ನೀಡಲಾಗಿತ್ತು. ದರ್ಶನದ ವೇಳೆ ದೇವಸ್ಥಾನದ ಸಿಬ್ಬಂದಿ ಕೆಟ್ಟದಾಗಿ ವರ್ತಿಸಿದ್ದಾರೆ. ಘಟನೆ ಬಹಿರಂಗವಾಗ್ತಿದ್ದಂತೆ ಕಾಂಗ್ರೆಸ್ ಸೇರಿದಂತೆ ಬಿಜೆಪಿ ಸಹಿತ ಎಲ್ಲ ಪಕ್ಷದ ನಾಯಕರು ಘಟನೆಯನ್ನು ಖಂಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...