alex Certify
ಕನ್ನಡ ದುನಿಯಾ       Mobile App
       

Kannada Duniya

ವಿದಾಯದ ಭಾಷಣದಲ್ಲಿ ಸಂಸತ್ ನ ಮೊದಲ ದಿನ ನೆನೆದ ಪ್ರಣಬ್

pranab_last_speech_1500814198_618x347

ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಂಸತ್ ಭವನದಲ್ಲಿ ವಿದಾಯದ ಭಾಷಣ ಮಾಡಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ಪಾಲ್ಗೊಂಡಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸೋಮವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಧಿಕಾರವಧಿ ಮುಗಿಯಲಿದೆ. ಜುಲೈ 25ರಂದು ರಾಮ್ನಾಥ್ ಕೋವಿಂದ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಬೀಳ್ಕೊಡುಗೆ ಭಾಷಣ ಮಾಡಿದ್ರು.

ಈ ವೇಳೆ ಪ್ರಣಬ್ ಮುಖರ್ಜಿಯವರ ರಾಜಕೀಯ ವೃತ್ತಿ ಜೀವನದ ಬಗ್ಗೆ ವಿವರಿಸಿದ್ರು. ಅವರ ಸಾಧನೆಗಳನ್ನು ಹೇಳಿದ್ರು. ನಂತ್ರ ಮಾತನಾಡಿದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಣಬ್ ಮುಖರ್ಜಿಯವರು ವಿದೇಶಿ ಸಚಿವರಾಗಿದ್ದ ದಿನಗಳನ್ನು ನೆನೆದ್ರು.

ನಂತ್ರ ಮಾತನಾಡಿದ ಪ್ರಣಬ್ ಮುಖರ್ಜಿ,  ಸ್ಪೀಕರ್ ಹಾಗೂ ಉಪರಾಷ್ಟ್ರಪತಿಗಳಿಗೆ ಧನ್ಯವಾದ ಸಲ್ಲಿಸಿದ್ರು. ಎಲ್ಲ ಸದಸ್ಯರ ಶುಭಾಶಯ ಸ್ವೀಕರಿಸಿದ್ರು. 22 ಜುಲೈ 1969ರಂದು ಮೊದಲ ಬಾರಿ ರಾಜ್ಯಸಭೆಗೆ ಕಾಲಿಟ್ಟ ದಿನವನ್ನು ರಾಷ್ಟ್ರಪತಿ ಈ ವೇಳೆ ನೆನೆದ್ರು. ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ಅಡ್ವಾಣಿಯವರನ್ನು ನೆನಪು ಮಾಡಿಕೊಂಡ್ರು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ನೆನಪು ಮಾಡಿಕೊಂಡ್ರು ಪ್ರಣಬ್.

ದೇಶದ ಐಕ್ಯತೆ ಸಂವಿಧಾನಕ್ಕೆ ಆಧಾರ. ಮೊದಲು ಸಂಸತ್ ನಲ್ಲಿ ಮಹತ್ವದ ವಿಚಾರಗಳು ಚರ್ಚೆಯಾಗ್ತಿದ್ದವು ಎಂದು ಪ್ರಣಬ್ ಭಾಷಣದಲ್ಲಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...