alex Certify
ಕನ್ನಡ ದುನಿಯಾ       Mobile App
       

Kannada Duniya

ವೈದ್ಯರ ನಿರ್ಲಕ್ಷಕ್ಕೆ ತುಂಬು ಗರ್ಭಿಣಿ ಬಲಿ…?

ರಾಜಸ್ಥಾನದ ಬುಂದಿ ಜಿಲ್ಲೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ 27 ವರ್ಷದ ತುಂಬು ಗರ್ಭಿಣಿ ಮಹಿಳೆ ಸಾವನ್ನಪ್ಪಿದ್ದಾರೆ ಅಂತ ಸ್ಥಳೀಯರು ಆರೋಪಿಸಿದ್ದಾರೆ. ಆಕೆಯನ್ನ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳದೆ ಮತ್ತು ಆರೈಕೆ ಮಾಡದೆ ಇರುವ ಕಾರಣ ಕೌಸಲ್ಯಾಬಾಯಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ ಅಂತ ಆಕೆಯ ಸಂಬಂಧಿಕರು ಸಿಟ್ಟಿಗೆದ್ದಿದ್ದಾರೆ.

ಕೌಸಲ್ಯಾಬಾಯಿಯವರು ಗರ್ಭವತಿಯಾದಾಗಿನಿಂದಲೂ ರಾಜಸ್ಥಾನದ ಬುಂದಿ ಜಿಲ್ಲಾಸ್ಪತ್ರೆಯಲ್ಲೇ ಆರೋಗ್ಯ ತಪಾಸಣೆ ಮಾಡಿಸುತ್ತಿದ್ದರು. ಆಕೆಗೆ ಇಬ್ಬರು ಪ್ರಸೂತಿ ತಜ್ಞರು ಚಿಕಿತ್ಸೆ ನೀಡುತ್ತಿದ್ದರು. ಕೆಲ ದಿನಗಳ ಹಿಂದಿನಿಂದಲೇ ಅವರು ಹೆರಿಗೆಗಾಗಿ ದಾಖಲಾಗುವ ಸಾಧ್ಯತೆಗಳಿತ್ತು. ಮಂಗಳವಾರ ರಾತ್ರಿ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಬಂದಿದ್ದಾರೆ.

ಹಾಗಿದ್ದರು ಅವರನ್ನ ಹೆರಿಗೆ ವಿಭಾಗದಲ್ಲಿ ದಾಖಲು ಮಾಡಿಕೊಳ್ಳಲು ಆಸ್ಪತ್ರೆ ಸಿಬ್ಬಂದಿ ಹಿಂದೇಟು ಹಾಕಿದ್ದಾರೆ. ಹೊರರೋಗಿಗಳ ವಿಭಾಗದಲ್ಲೂ ಆಕೆಯನ್ನ ಸಿಬ್ಬಂದಿ ಸರಿಯಾಗಿ ಆರೈಕೆ ಮಾಡದ ಕಾರಣ ಆಕೆ ಮತ್ತೆ ಮನೆಗೆ ತೆರಳಿ ಬೆಳಗಿನ ಜಾವದಲ್ಲಿ ಮತ್ತೆ ಆಸ್ಪತ್ರೆಗೆ ಹಾಜರಾಗಿದ್ದಾರಂತೆ.

ರಾತ್ರಿ ಪಾಳಯದಲ್ಲಿ ಕೆಲಸ ಮಾಡುತ್ತಿದ್ದ ವೈದ್ಯ ಸಿಬ್ಬಂದಿ ಮುಂದಿನ ಪಾಳಿಯವರು ನಿಮ್ಮನ್ನ ನೋಡಿಕೊಳ್ತಾರೆ ಅಂತ ಹೇಳಿ ಮನೆಗೆ ತೆರಳಿದ್ದಾರೆ. ಈ ವೇಳೆ ಹೆರಿಗೆ ನೋವು ಹೆಚ್ಚಾಗಿ ಕೌಸಲ್ಯಾ ಬಾಯ್ ಮೃತಪಟ್ಟಿದ್ದಾರಂತೆ. ಸೂಕ್ತ ಸಮಯಕ್ಕೆ ಕೌಸಲ್ಯಾಗೆ ಚಿಕಿತ್ಸೆ ದೊರಕಿದ್ದರೆ ಆಕೆ ಬದುಕುಳಿಯುತ್ತಿದ್ದಳು ಅಂತ ಕೌಸಲ್ಯ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕೋಪಗೊಂಡಿದ್ದಾರೆ.

ಆಸ್ಪತ್ರೆಯಲ್ಲಿ ಬೆಡ್ ಗಳ ಕೊರತೆ ಇದ್ದ ಕಾರಣ ಆಕೆಯನ್ನ ರಾತ್ರಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲಿಲ್ಲ. ಅಲ್ಲದೇ ವೈದ್ಯರಿಗೆ ತಿಳಿಸದೆ ಅವರು ಆಸ್ಪತ್ರೆಯಿಂದ ತೆರಳಿದ ಕಾರಣ ಇದು ವೈದ್ಯರ ನಿರ್ಲಕ್ಷ್ಯದಿಂದ ಆದ ತಪ್ಪಲ್ಲ ಅಂತ ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ. ರಾತ್ರಿಯಲ್ಲಿ ಕೌಸಲ್ಯಾ ಅವರನ್ನು ಪರೀಕ್ಷಿಸಿದ ವೈದ್ಯರು ಆಕೆ ಅದಾಗ್ಲೇ ನಾಡಿ ಮಿಡಿತ ಕ್ಷೀಣಿಸಿತ್ತು. ರಕ್ತದೊತ್ತಡವೂ ಕುಸಿದಿತ್ತು. ಹಾಗಿದ್ದರು ಅವರು ಮನೆಗೆ ತೆರಳಿದ್ದರಿಂದ ಆಕೆಗೆ ಸಾವು ಸಂಭವಿಸಿದೆ ಅಂತಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...