alex Certify
ಕನ್ನಡ ದುನಿಯಾ       Mobile App
       

Kannada Duniya

800 ಅಡಿ ಆಳದ ಕಂದಕಕ್ಕೆ ಬಿದ್ದ ಗರ್ಭಿಣಿ

ಮುಂಬೈನ ಮಾಥೇರಾನ್ ಎಂಬಲ್ಲಿ ರೈಲ್ವೆ ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದ 25 ವರ್ಷದ ಮಹಿಳೆಯೊಬ್ಬಳು 800 ಅಡಿ ಆಳದ ಕಂದಕಕ್ಕೆ ಬಿದ್ದಿದ್ಲು. ಆಕೆ 6 ತಿಂಗಳ ಗರ್ಭಿಣಿ ಬೇರೆ. ನಡುವೆ ಪೊದೆಗಳ ಮಧ್ಯೆ ಸಿಕ್ಕಿಹಾಕಿಕೊಂಡಿದ್ದಳು.

ಸ್ಥಳೀಯರು ಗರ್ಭಿಣಿಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಅಂತಾ ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಪತಿಯ ಪಾತ್ರವೇನಾದ್ರೂ ಇದೆಯಾ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಕಂದಕಕ್ಕೆ ಬಿದ್ದ ವಿಜಯಾ, 9 ತಿಂಗಳುಗಳ ಹಿಂದಷ್ಟೆ ಸುರೇಶ್ ಪವಾರ್ ನನ್ನು ಮದುವೆಯಾಗಿದ್ಲು. ಇಬ್ಬರಿಗೂ ಇದು ಎರಡನೇ ಮದುವೆ. ಮೊದಲ ವಿವಾಹದಿಂದ ಮಕ್ಕಳು ಸಹ ಇದ್ದಾರೆ. ಗಣಪತಿ ದೇವಾಲಯಕ್ಕೆ ಭೇಟಿ ನೀಡಲು ಮಾಥೇರಾನ್ ಗೆ ಬಂದಿದ್ದರು.

ಟಾಯ್ ಟ್ರೇನ್ ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಮಹಿಳೆ ಕಂದಕಕ್ಕೆ ಬಿದ್ದಿದ್ದಾಳೆ. ಘಟನೆಯಲ್ಲಿ ವಿಜಯಾ ಗಾಯಗೊಂಡಿದ್ದಾಳೆ, ಆದ್ರೆ ಹೊಟ್ಟೆಯಲ್ಲಿರೋ ಮಗುವಿಗೆ ಯಾವುದೇ ಅಪಾಯವಾಗಿಲ್ಲ. ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಪತಿಯೇ ತನ್ನನ್ನು ಕಂದಕಕ್ಕೆ ನೂಕಿದ್ದಾನೆ ಅಂತಾ ಗರ್ಭಿಣಿ ಹೇಳಿದ್ದಾಳಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...