alex Certify
ಕನ್ನಡ ದುನಿಯಾ       Mobile App
       

Kannada Duniya

ಪರೀಕ್ಷೆಗಾಗಿ ವಿಮಾನ ನಿಲ್ದಾಣದಲ್ಲಿ ಗರ್ಭಿಣಿ ಬಟ್ಟೆ ಬಿಚ್ಚಿಸಿದ್ರು ಸಿಬ್ಬಂದಿ

ಗುವಾಹಟಿ ವಿಮಾನ ನಿಲ್ದಾಣದಲ್ಲಿ ಸಿ ಐ ಎಸ್ ಎಫ್ ಭದ್ರತಾ ಪಡೆ ಗರ್ಭಿಣಿ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಮಹಿಳೆ ಗರ್ಭಿಣಿ ಹೌದಾ? ಅಲ್ವಾ ಎಂಬುದನ್ನು ಪರೀಕ್ಷೆ ಮಾಡಲು ಬಟ್ಟೆ ಬಿಚ್ಚಿಸಿದ್ದಾರೆ. ಡಾಲಿ ಗೋಸ್ವಾಮಿ ಪತಿ ಶಿವಂ ಶರ್ಮಾ ಟ್ವೀಟರ್ ಮೂಲಕ ಸಿ ಐ ಎಸ್ ಎಫ್ ಭದ್ರತಾ ಪಡೆ ವಿರುದ್ಧ ದೂರು ನೀಡಿದ್ದಾರೆ.

ಟ್ವೀಟರ್ ನಲ್ಲಿ ಶಿವಂ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ. ಸಿ ಐ ಎಸ್ ಎಫ್ ಸಿಬ್ಬಂದಿಗೆ ಗರ್ಭಿಣಿ ಜೊತೆ ಹೇಗೆ ವ್ಯವಹರಿಸಬೇಕೆಂಬುದನ್ನು ಹೇಳಿಕೊಡಬೇಕಿದೆ. ಭದ್ರತಾ ಪರೀಕ್ಷೆ ವೇಳೆ ಪತ್ನಿ ಬಟ್ಟೆ ಬಿಚ್ಚಿಸಿದ್ದಾರೆ. ಈ ದೇಶದಲ್ಲಿ ಗರ್ಭಿಣಿಯಾಗೋದು ಅಪರಾಧವಾ ಎಂದು ಶಿವಂ ಪ್ರಶ್ನೆ ಮಾಡಿದ್ದಾರೆ.

ಘಟನೆ ಜೂನ್ 24 ರಂದು ನಡೆದಿದೆ. ಗರ್ಭಿಣಿ, ತಂದೆ ಅಂತ್ಯಸಂಸ್ಕಾರ ಮುಗಿಸಿ ಗುವಾಹಟಿಯಿಂದ ದೆಹಲಿಗೆ ಹೊರಟಿದ್ದಳು ಎನ್ನಲಾಗಿದೆ. ಮಹಿಳೆ 25 ವಾರಗಳ ಗರ್ಭಿಣಿ. ವೈದ್ಯರಿಂದ ಪರೀಕ್ಷೆ ನಡೆಸುವ ಬದಲು ಮಹಿಳೆ ಹೊಟ್ಟೆಯನ್ನು ಒತ್ತಿ ಸಿಬ್ಬಂದಿ ಪರೀಕ್ಷೆ ಮಾಡಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...