alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆ ವಿರುದ್ದವೇ ತಿರುಗಿ ಬಿದ್ದ ಪ್ರಣಬ್ ಪುತ್ರಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪಾಲ್ಗೊಳ್ಳುವ ಹಿನ್ನಲೆಯಲ್ಲಿ ಮತ್ತೊಂದು ಕಿರಿಕಿರಿ ಪ್ರಾರಂಭವಾಗಿದೆ.

ಈ ಸಭೆಗೆ ಹೋಗಬಾರದೆಂದು ಸ್ವತಃ ಪ್ರಣಬ್ ಪುತ್ರಿ ಹಾಗೂ ದೆಹಲಿ ಕಾಂಗ್ರೆಸ್ ವಕ್ತಾರೆ ಶರ್ಮಿಷ್ಟಾ ಮುಖರ್ಜಿ ಹೇಳಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಸಂಘ ಪರಿವಾರ ತನ್ನ ಕೇಸರಿ ತತ್ವಗಳನ್ನು ನಿಮ್ಮ ಮೇಲೆ ಹೇರಲು ಮುಂದಾಗುತ್ತಿದೆ. ಇದು ಬಿಜೆಪಿಯ ಅತಿ ಕೀಳು ಮಟ್ಟದ ತಂತ್ರ. ಆರ್.ಎಸ್.ಎಸ್. ನ ಸಭೆಯಲ್ಲಿ ಭಾಗಿಯಾಗಿ ನೀವೂ ಕೋಮುಗಲಭೆ ಉಂಟು ಮಾಡುವ, ಸುಳ್ಳು ಸುದ್ದಿ ಬಿತ್ತರಿಸುವ ಕಾಯಕಕ್ಕೆ ಕೈಹಾಕಿದಂತಾಗುತ್ತದೆ. ಇದು ಸರಿಯಲ್ಲ ಎಂದಿದ್ದಾರೆ.

ಸಭೆಯಲ್ಲಿ ಭಾಷಣ ಮಾಡಬಹುದು. ಆದರೆ ಭಾಷಣ ಕಳೆದುಹೋದರೂ ನೀವಿದ್ದ ದೃಶ್ಯಗಳಿಂದ ಹಲವಾರು ಸುಳ್ಳು ಸುದ್ದಿಗಳನ್ನು ಜನರಿಗೆ ವಿನಿಮಯ ಮಾಡುತ್ತಾರೆ. ಇದು ಬಿಜೆಪಿಯ ಮತ್ತೊಂದು ಹೊಸ ಕುತಂತ್ರ ಎಂದು ತಮ್ಮ ಟ್ವಿಟರ್ ಮೂಲಕ ಬಿಜೆಪಿ, ಆರ್.ಎಸ್.ಎಸ್. ವಿರುದ್ಧ ಶರ್ಮಿಷ್ಟಾ ಕಿಡಿಕಾರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...