alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸಲಿಂಗಿಯ ‘ಪ್ರಗ್ನೆಂಟ್’ ಪ್ರಹಸನಕ್ಕೆ ಗ್ಯಾರಂಟಿ ನಗ್ತೀರಿ

gents kerala

ಗರ್ಭ ಧರಿಸುವುದು ಹೆಣ್ಣುಮಕ್ಕಳು ಮಾತ್ರ ಎಂಬುದು ಗೊತ್ತಿದ್ದರೂ ಇಲ್ಲೊಬ್ಬ ಪುಣ್ಯಾತ್ಮ ತಾನು ಗರ್ಭ ಧರಿಸಿದ್ದೇನೆ ಎಂದು ಹೇಳಿದ್ದಲ್ಲದೇ, ಮನೆಯವರನ್ನೂ ಪೇಚಾಡುವಂತೆ ಮಾಡಿದ್ದಾನೆ. ಅಂದ ಹಾಗೆ ಈ ಘಟನೆ ನಡೆದಿರುವುದು ಕೇರಳದ ಕೋಯಿಕ್ಕೋಡ್ ನಲ್ಲಿ. ಅಷ್ಟಕ್ಕೂ ಏನಿದು ಘಟನೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಇಲ್ಲಿನ ಸುಮಾರು 25 ವರ್ಷ ವಯಸ್ಸಿನ ಯುವಕನೊಬ್ಬ ತಾನು ಗರ್ಭ ಧರಿಸಿರುವುದಾಗಿ ಮನೆಯಲ್ಲಿ ಹೇಳಿದ್ದಾನೆ. ಹೊಟ್ಟೆಯಲ್ಲಿ ಮಗು ಚಲನೆಯಲ್ಲಿದ್ದ ಹಾಗೆ ಅನುಭವವಾಗುತ್ತಿದೆ ಎಂದು ಭಾವಿಸಿ ಗರ್ಭಿಣಿಯರಂತೆ ಮೆಲ್ಲಗೆ ಓಡಾಡುವುದು, ಸಣ್ಣಪುಟ್ಟ ಕೆಲಸಗಳನ್ನು ಮಾಡುವುದು ಮಾತ್ರ ಮಾಡಿದ್ದಾನೆ. ಅಲ್ಲದೇ, ಆಹಾರ ಕ್ರಮದಲ್ಲಿಯೂ ಗರ್ಭಿಣಿಯರ ರೀತಿಯಲ್ಲಿ ಪಥ್ಯ ಅನುಸರಿಸಿದ್ದಾನೆ. ನೀನು ಗರ್ಭಿಣಿಯಾಗಲು ಸಾಧ್ಯವಿಲ್ಲ. ಗಂಡುಮಕ್ಕಳು ಗರ್ಭಿಣಿಯರಾಗಲ್ಲ ಎಂದು ಮನೆಯವರು ಎಷ್ಟು ಹೇಳಿದರೂ ಈತ ಕೇಳಿಲ್ಲ.

ಹೀಗೆ ತನ್ನನ್ನು ಗರ್ಭಿಣಿ ಎಂದುಕೊಂಡೇ ವರ್ತಿಸುತ್ತಿದ್ದ ಯುವಕನನ್ನು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರ ಬಳಿ ಆತ, ನಾನು ಸಲಿಂಗಿಯಾಗಿದ್ದು, ಗೆಳೆಯನ ಸಂಪರ್ಕದಿಂದ ಗರ್ಭಿಣಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆದರೆ, ವೈದ್ಯರು ಪರೀಕ್ಷಿಸಿದಾಗ ಆ ಯುವಕ ಭ್ರಮೆಯಲ್ಲಿದ್ದಾನೆ ಎಂಬುದು ಗೊತ್ತಾಗಿ ಮಾನಸಿಕ ತಜ್ಞರ ಬಳಿ ಚಿಕಿತ್ಸೆ ಕೊಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...