alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರದ್ಯುಮನ್ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಗುರ್ಗಾಂವ್ ರಯಾನ್ ಇಂಟರ್ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿ ಪ್ರದ್ಯುಮನ್ ಹತ್ಯೆ ಪ್ರಕರಣದ ಸಿಸಿ ಟಿವಿ ದೃಶ್ಯಗಳು ಬೆಳಕಿಗೆ ಬಂದಿವೆ. ಆರೋಪಿ 11ನೇ ತರಗತಿ ವಿದ್ಯಾರ್ಥಿ ಜೊತೆ ಏಳು ವರ್ಷದ ಪ್ರದ್ಯುಮನ್ ಶೌಚಾಲಯದಲ್ಲಿದ್ದ ಎಂಬುದು ಸಿಸಿ ಟಿವಿ ದೃಶ್ಯಾವಳಿಯಿಂದ ತಿಳಿದು ಬಂದಿದೆ.

ಸಿಬಿಐ ಎರಡು ವಿಡಿಯೋ ಕ್ಲಿಪ್ ಗಳನ್ನು ಕೋರ್ಟ್ ಗೆ ಹಸ್ತಾಂತರಿಸಿದೆ. ತಂದೆ ಸ್ಕೂಲಿಗೆ ಬಿಡ್ತಿದ್ದಂತೆ ನೇರವಾಗಿ ಪ್ರದ್ಯುಮನ್ ಶೌಚಾಲಯಕ್ಕೆ ಹೋಗಿದ್ದಾನೆ. ಪ್ರದ್ಯುಮನ್ ಬಳಿಕ ಹರ್ಯಾಣ ಪೊಲೀಸರು ಬಂಧಿಸಿರುವ ಕಂಡಕ್ಟರ್ ಅಶೋಕ್ ಕುಮಾರ್ ಶೌಚಾಲಯಕ್ಕೆ ಹೋಗಿದ್ದಾನೆ. ಆತನ ಹಿಂದೆಯೇ 11ನೇ ತರಗತಿ ವಿದ್ಯಾರ್ಥಿ ಹೋಗಿದ್ದಾನೆ.

ಅಶೋಕ್ ಕುಮಾರ್ ಹಾಗೂ ಪ್ರದ್ಯುಮನ್ ಒಳಗಿರುವಾಗಲೇ 11ನೇ ತರಗತಿ ವಿದ್ಯಾರ್ಥಿ ಶೌಚಾಲಯದಿಂದ ಹೊರಗೆ ಬಂದು ಮತ್ತೆ ಶೌಚಾಲಯದ ಒಳಗೆ ಹೋಗಿದ್ದಾನೆ. ಶೌಚಾಲಯದಲ್ಲಿ ಇಬ್ಬರು 8-9 ಸೆಕೆಂಡ್ ಕಳೆದಿದ್ದಾರೆ. ಈ ಎಲ್ಲ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದನ್ನು ಸಿಬಿಐ ಕೋರ್ಟ್ ಮುಂದಿಟ್ಟಿದೆ.

ಗುರುವಾರ ಅಶೋಕ್ ಕುಮಾರ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ. ಸೂಕ್ತ ವರದಿ ಬಂದ ನಂತ್ರ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...