alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಪೊಲೀಸರಿಂದಲೇ ನಾಶವಾಗಿದೆ ಕೊಲೆಯ ಸಾಕ್ಷ್ಯ

ಶಾಲೆಯಲ್ಲಿ ಭೀಕರವಾಗಿ ಕೊಲೆಯಾಗಿದ್ದ ಪುಟ್ಟ ಬಾಲಕ ಪ್ರದ್ಯುಮನ್ ಹಂತಕನ ಬಗ್ಗೆ ಇದ್ದ ಸಾಕ್ಷ್ಯಗಳನ್ನು ಪೊಲೀಸರೇ ನಾಶಪಡಿಸಿರುವ ಆಘಾತಕಾರಿ ಸಂಗತಿ ಸಿಬಿಐ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ರಯಾನ್ ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ಸೆಪ್ಟೆಂಬರ್ 8ರಂದು ಪ್ರದ್ಯುಮನ್ ಕೊಲೆಯಾಗಿದ್ದ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿದ್ದ ಗುರ್ಗಾಂವ್ ಪೊಲೀಸರು ಬಸ್ ಕಂಡಕ್ಟರ್ ಒಬ್ಬನನ್ನು ಬಂಧಿಸಿದ್ದರು. ಆದ್ರೆ ತನಿಖೆ ಕೈಗೆತ್ತಿಕೊಂಡ ಸಿಬಿಐ ಕಂಡಕ್ಟರ್ ಗೆ ಕ್ಲೀನ್ ಚಿಟ್ ನೀಡಿ, 11ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದೆ. ವಿಚಾರಣೆ ವೇಳೆ ವಿದ್ಯಾರ್ಥಿ ತಾನು ಪ್ರದ್ಯುಮನ್ ನನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಅಂತಾ ಸಿಬಿಐ ಹೇಳಿತ್ತು.

ಪೋಷಕರ ಸಭೆ ಮತ್ತು ಪರೀಕ್ಷೆಯನ್ನು ಮುಂದೂಡುವ ಉದ್ದೇಶದಿಂದ ತಾನೇ ಪ್ರದ್ಯುಮನ್ ನನ್ನು ಕೊಲೆ ಮಾಡಿದ್ದಾಗಿ ತನ್ನ ತಂದೆಯ ಸಮಕ್ಷಮದಲ್ಲೇ ವಿದ್ಯಾರ್ಥಿ ತಪ್ಪೊಪ್ಪಿಕೊಂಡಿದ್ದಾನೆ ಅಂತಾ ಹೇಳಲಾಗ್ತಿದೆ. ತನಿಖೆ ವೇಳೆ ಪೊಲೀಸರು ಮಾಡಿರೋ ಪ್ರಮಾದಗಳು ಈಗ ಒಂದೊಂದಾಗೇ ಬೆಳಕಿಗೆ ಬರುತ್ತಿವೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...