alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಮಾನವನ ಕ್ರೌರ್ಯದ ಫೋಟೋ

ಮಾನವನ ಮಿತಿ ಮೀರಿದ ದುರಾಸೆಯ ಕಾರಣಕ್ಕಾಗಿ ದಿನೇ ದಿನೇ ಕಾಡು ನಾಶವಾಗುತ್ತಿದ್ದು, ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡುತ್ತಿವೆ. ಇದಷ್ಟೇ ಅಲ್ಲ, ದಿಢೀರ್ ಶ್ರೀಮಂತನಾಗುವ ಹಂಬಲದಲ್ಲಿ ಮಾನವ, ಕಾಡು ಪ್ರಾಣಿಗಳ ಹತ್ಯೆಗೆ ಕಾರಣನಾಗುತ್ತಿದ್ದಾನೆ.

ಜೊತೆಗೆ ತಮ್ಮ ಹಿಂಸಾತ್ಮಕ ಮನೋಭಾವಕ್ಕೆ ತಕ್ಕಂತೆ ಕೆಲವರು ಕಾಡು ಪ್ರಾಣಿಗಳಿಗೆ ವಿಕೃತ ಹಿಂಸೆ ನೀಡಿ ಕ್ರೌರ್ಯ ಮೆರೆಯುತ್ತಿದ್ದಾರೆ. ಹೀಗೆ ಆನೆ ಹಾಗೂ ಅದರ ಮರಿಗೆ ಹಿಂಸೆ ನೀಡುತ್ತಿರುವುದರ ಫೋಟೋ ಒಂದು ಪುರಸ್ಕಾರಕ್ಕೆ ಪಾತ್ರವಾಗಿದ್ದು, ಇದರ ಮೂಲಕ ಮಾನವರ ವಿಕೃತ ನಡವಳಿಕೆ ಅನಾವರಣಗೊಂಡಿದೆ.

ಆನೆ ಹಾಗೂ ಅದರ ಮರಿ ಬಳಿ ಪಟಾಕಿ ಸಿಡಿಸಿದ್ದು, ಭಯಭೀತಗೊಂಡ ಆನೆ ತನ್ನ ಮರಿಯೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಹವಣಿಸುತ್ತಿದೆ. ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ಈ ಫೋಟೋ ತೆಗೆಯಲಾಗಿದೆ ಎನ್ನಲಾಗಿದ್ದು, ಕಾಡು ಪ್ರಾಣಿಗಳ ವಿರುದ್ದದ ಮಾನವನ ದುಷ್ಟ ನಡವಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಖಂಡನೆ ವ್ಯಕ್ತವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...