alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿವರ ಹೆಲಿಕಾಪ್ಟರ್ ಇಳಿಯಲು 26 ಗಂಟೆ ಕರೆಂಟ್ ಕಟ್

ಮಧ್ಯ ಪ್ರದೇಶದಲ್ಲಿ ನಡೆದಿರುವ ಘಟನೆಯೊಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರ ಸಚಿವರ ಹೆಲಿಕಾಪ್ಟರ್ ಸುರಕ್ಷಿತವಾಗಿ ಕೆಳಗಿಳಿಯಬೇಕೆಂಬ ಕಾರಣಕ್ಕೆ ಸುಮಾರು 20 ಹಳ್ಳಿಗಳಲ್ಲಿ 26 ಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಳಿಸಲಾಗಿದೆ.

ಇಂದು ಮಧ್ಯಪ್ರದೇಶದ ಸಾತ್ನಾ ಜಿಲ್ಲೆಗೆ ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡುವ ಕಾರ್ಯಕ್ರಮವಿದ್ದು, ಬ್ರಿಟಿಷರ ವಿರುದ್ದ ಹೋರಾಡಿದ್ದ ಠಾಕೂರ್ ರನ್ಮತ್ ಸಿಂಗ್ ಅವರ ಪ್ರತಿಮೆಯನ್ನು ಆನಾವರಣಗೊಳಿಸಲಿದ್ದಾರೆ.

ಗೃಹ ಸಚಿವರ ಭೇಟಿ ಹಿನ್ನಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಲು ಶನಿವಾರದಿಂದಲೇ ಹೆಲಿಕಾಪ್ಟರ್ ಹಾರಾಟ ನಡೆಸುತ್ತಿವೆ. ಈ ಭಾಗದಲ್ಲಿ ಹೈಟೆನ್ಶನ್ ಲೈನ್ ಹಾದುಹೋಗಿದೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಮೇ 19 ರ ಸಂಜೆ 4 ಗಂಟೆಯಿಂದ ಮೇ 20 ರ ಸಂಜೆ 6 ಗಂಟೆವರೆಗೆ 26 ಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಳಿಸಲಾಗಿದೆ.

ಸಾತ್ನಾ ಜಿಲ್ಲೆಯಲ್ಲಿ ಉಷ್ಣಾಂಶ 42 ಡಿಗ್ರಿಯಿದ್ದು, ಸೆಕೆಯಿಂದ ಜನ ತತ್ತರಿಸಿದ್ದಾರೆ. ಇದರ ಮಧ್ಯೆ ವಿದ್ಯುತ್ ಸ್ಥಗಿತಗೊಂಡಿರುವುದರಿಂದ ನೀರು ಬರದ ಕಾರಣ ಪರಿತಪಿಸಿದ್ದಾರೆ. ವಿದ್ಯುತ್ ಕಡಿತಗೊಳಿಸುವ ಸ್ವಲ್ಪ ಮುಂಚೆ ಇಲಾಖೆ ಪತ್ರಿಕಾ ಪ್ರಕಟಣೆ ನೀಡಿದ್ದು, ಸುಮಾರು 20 ಗ್ರಾಮಗಳ ಗ್ರಾಮಸ್ಥರಿಗೆ ಇದು ಗಮನಕ್ಕೆ ಬಂದಿಲ್ಲ. ಹೀಗಾಗಿ ಯಾವುದೇ ಮುಂಜಾಗರೂಕ ಕ್ರಮಗಳನ್ನೂ ಕೈಗೊಳ್ಳಲಾಗದೆ ತೊಂದರೆ ಅನುಭವಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...