alex Certify
ಕನ್ನಡ ದುನಿಯಾ       Mobile App
       

Kannada Duniya

ಕರೆಂಟ್ ಬಿಲ್ ಜಾಸ್ತಿ ಬಂದಿದ್ದಕ್ಕೆ ಎಂಜಿನಿಯರ್ ಹತ್ಯೆ

ENGINEER MURDER 1ಮಧ್ಯಪ್ರದೇಶದ ಭೋಪಾಲ್ ನಲ್ಲಿ ಗ್ರಾಹಕರ ಕೋಪಕ್ಕೆ ವಿದ್ಯುತ್ ಮಂಡಳಿಯ ಎಂಜಿನಿಯರ್ ಬಲಿಯಾಗಿದ್ದಾನೆ.

ಸಂತೋಷ್ ಎಂಬಾತನಿಗೆ 1038 ರೂಪಾಯಿ ಬಿಲ್ ಬಂದಿತ್ತು. ಈ ಬಗ್ಗೆ ಕಚೇರಿಗೆ ಬಂದು ಆಕ್ಷೇಪ ವ್ಯಕ್ತಪಡಿಸಿದ ಸಂತೋಷ್ ಮತ್ತಾತನ ಸಂಬಂಧಿ ನಿತೇಶ್ ದಾಂಧಲೆ ಮಾಡಿದ್ದಾರೆ. ಅವರನ್ನು ಸಮಾಧಾನಪಡಿಸಲು ಬಂದ ಎಂಜಿನಿಯರ್ ಕಮಲಾಕರ್ ಮೇಲೆ ಹಲ್ಲೆ ಮಾಡಿದ್ದಾರೆ. ಏಟು ತಾಳಲಾರದೆ ಸ್ಥಳದಲ್ಲೇ ರಕ್ತ ವಾಂತಿ ಮಾಡಿಕೊಂಡ ಕಮಲಾಕರ್ ಆಸ್ಪತ್ರೆಗೆ ಸಾಗಿಸುವಷ್ಠರಲ್ಲಿ ಮೃತಪಟ್ಟರು.

ಹತ್ಯೆಯಾದ ಕಮಲಾಕರ್ ಅವರಿಗೆ ಈಗಿನ್ನೂ 24 ವರ್ಷವಾಗಿತ್ತು, 3 ತಿಂಗಳ ಪುಟ್ಟ ಮಗು ಕೂಡ ಇತ್ತು. ಗ್ರಾಹಕರ ಆಕ್ರೋಶದ ಕಿಚ್ಚಿಗೆ ಪತಿಯನ್ನೇ ಕಳೆದುಕೊಂಡಿರುವ ಕಮಲಾಕರ್ ಅವರ ಪತ್ನಿ ಆಘಾತಕ್ಕೊಳಗಾಗಿದ್ದಾರೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...