alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯನ್ನು ಈ ಕೆಲಸಕ್ಕೆ ಪ್ರೋತ್ಸಾಹಿಸ್ತು ಕಿತ್ತು ತಿನ್ನುವ ಬಡತನ

baby_bjkb8kn-1

ಹಸಿವು ಮನುಷ್ಯನನ್ನು ಏನು ಬೇಕಾದ್ರೂ ಮಾಡಿಸುತ್ತದೆ. ಬಡತನದಲ್ಲಿ ಬೇಯುವ ಮನುಷ್ಯ ಹೊಟ್ಟೆ ಪಾಡಿಗಾಗಿ ಯಾವ ಕೆಲಸಕ್ಕಾದ್ರೂ ಇಳಿಯುತ್ತಾನೆ. ತೆಲಂಗಾಣದ ಖಮ್ಮಮ್ ಜಿಲ್ಲೆಯಲ್ಲಿ ತಾಯಿಯೊಬ್ಬಳು ಹೆತ್ತ ಮಗುವನ್ನು ಮಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಕೇವಲ ಐದು ಸಾವಿರ ರೂಪಾಯಿಗೆ ನವಜಾತ ಶಿಶುವನ್ನು ತಾಯಿ ಮಾರಾಟ ಮಾಡಿದ್ದಾಳೆ. ಮಹಿಳೆಯೊಬ್ಬಳು ಸರ್ಕಾರಿ ಆಸ್ಪತ್ರೆಯಲ್ಲಿ ತನ್ನ ಆರನೇ ಸಂತಾನಕ್ಕೆ ಜನ್ಮ ನೀಡಿದ್ದಾಳೆ. ಭದ್ರಾಚಲಂನ ಮಹಿಳೆಯೊಬ್ಬಳಿಗೆ ಹೆರಿಗೆ ನಂತ್ರ ಮಗುವನ್ನು ಮಹಿಳೆ ನೀಡಿದ್ದಾಳೆ. ಆರ್ಥಿಕ ಸ್ಥಿತಿ ಹದಗೆಟ್ಟಿರುವ ಕಾರಣ ಮಗುವಿನ ಪಾಲನೆ-ಪೋಷಣೆ ಸಾಧ್ಯವಿಲ್ಲ. ಹಾಗಾಗಿ ಮಗುವನ್ನು ಮಾರಾಟ ಮಾಡಿದ್ದೇನೆಂದು ಮಹಿಳೆ ಹೇಳಿದ್ದಾಳೆ. ನಾಲ್ಕು ಹೆಣ್ಣು ಮಗು ಹಾಗೂ ಒಂದು ಗಂಡು ಮಗುವಿನ ನಂತ್ರ ಈ ಮಗು ಜನಿಸಿದೆ. ರಿಕ್ಷಾ ಚಾಲಕ ಗಂಡ ಬಂದ ಹಣವನ್ನು ಕುಡಿತಕ್ಕೆ ಖರ್ಚು ಮಾಡ್ತಾನೆ ಎಂದು ತಾಯಿ ತನ್ನ ದುಃಖ ತೋಡಿಕೊಂಡಿದ್ದಾಳೆ.

ನನಗೆ ಮೊಮ್ಮಕ್ಕಳಿಲ್ಲದ ಕಾರಣ ಈ ಮಗುವನ್ನು ಪಡೆದಿದ್ದೆ ಎಂದು ಮಗು ಪಡೆದ ಮಹಿಳೆ ಹೇಳಿಕೆ ನೀಡಿದ್ದಾಳೆ. ಜೊತೆಗೆ ತಾಯಿ ಮಡಿಲಿಗೆ ಮಗುವನ್ನು ಸೇರಿಸಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...