alex Certify
ಕನ್ನಡ ದುನಿಯಾ       Mobile App
       

Kannada Duniya

AAP ಕಛೇರಿ ಮುಂದೆ ಹಾಕಲಾಗಿದೆ ಇಂತ ಪೋಸ್ಟರ್

vishwas-mos-2_061717100643ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದಲ್ಲಿನ ಒಳ ಜಗಳ ಮತ್ತೊಮ್ಮೆ ಬಯಲಾಗಿದೆ. ದೆಹಲಿಯ ಆಮ್ ಆದ್ಮಿ ಪಕ್ಷದ ಕಛೇರಿ ಮುಂದೆಯೇ ಮುಖಂಡ ಕುಮಾರ್ ವಿಶ್ವಾಸ್ ವಿರುದ್ದದ ಪೋಸ್ಟರ್ ಗಳನ್ನು ಹಾಕಲಾಗಿದೆ.

ಕುಮಾರ್ ವಿಶ್ವಾಸ್ ಪಕ್ಷ ದ್ರೋಹಿಯಾಗಿದ್ದು, ಅವರನ್ನು ಕೂಡಲೇ ಪಕ್ಷದಿಂದ ಉಚ್ಚಾಟಿಸಬೇಕೆಂದು ಇದರಲ್ಲಿ ಆಗ್ರಹಿಸಲಾಗಿದೆ. ಕೆಲ ದಿನಗಳ ಹಿಂದೆಯೇ ಕುಮಾರ್ ವಿಶ್ವಾಸ್ ಪಕ್ಷ ತೊರೆಯಲು ಮುಂದಾಗಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನವೊಲಿಸಿದ್ದರು. ಈ ಮಧ್ಯೆ ಕುಮಾರ್ ವಿಶ್ವಾಸ್ ವಿರುದ್ದ ಪೋಸ್ಟರ್ ಹಾಕಲಾಗಿದೆ.

ಇತ್ತೀಚೆಗೆ ನಡೆದ ಪಂಜಾಬ್ ಹಾಗೂ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಬಹುಮತ ಗಳಿಸಬಹುದೆಂಬ ವಿಶ್ವಾಸ ಹೊಂದಿದ್ದ ಮುಖಂಡರಿಗೆ ಫಲಿತಾಂಶದಿಂದ ನಿರಾಸೆಯಾಗಿತ್ತು. ಅದಾದ ಬಳಿಕ ಕುಮಾರ್ ವಿಶ್ವಾಸ್ ಚುನಾವಣಾ ಸಂದರ್ಭದಲ್ಲಿ ಪಕ್ಷದ ಕೆಲ ಮುಖಂಡರು ಪಂಚತಾರಾ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರೆಂದು ಆರೋಪಿಸಿದ್ದರು.

ಇದಕ್ಕೆ ತಿರುಗೇಟು ನೀಡಿದ್ದ ಪಕ್ಷದ ಖಜಾಂಚಿ ದೀಪಕ್ ಬಾಜ್ಪೇಯ್, ಪ್ರಚಾರದ ವೇಳೆ ಗೋವಾದ ಪಂಚತಾರಾ ಹೋಟೆಲ್ ಜೆ.ಡಬ್ಲ್ಯು, ಮಾರಿಯಾಟ್ ನಲ್ಲಿ ಉಳಿದುಕೊಂಡಿದ್ದ ನಾಯಕರ್ಯಾರು ಎಂದು ಪರೋಕ್ಷವಾಗಿ ಕುಮಾರ್ ವಿಶ್ವಾಸ್ ಗೆ ತಿರುಗೇಟು ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕುಮಾರ್ ವಿಶ್ವಾಸ್ ಆಪ್ತರು ಪಂಚತಾರಾ ಹೋಟೆಲ್ ನಲ್ಲಿ ಕುಮಾರ್ ವಿಶ್ವಾಸ್ ವಾಸ್ತವ್ಯ ಹೂಡಿದ್ದರೂ ಅದಕ್ಕೆ ಪಕ್ಷದ ಹಣ ಬಳಸಿಲ್ಲವೆಂದು ಸಮರ್ಥಿಸಿಕೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...