alex Certify
ಕನ್ನಡ ದುನಿಯಾ       Mobile App
       

Kannada Duniya

‘ದಿ ಲೈ ಲಾಮಾ’ ಪೋಸ್ಟರ್ ಅಂಟಿಸಿದ್ದವರ ವಿರುದ್ದ ಕೇಸ್

ಪ್ರಧಾನಿ ನರೇಂದ್ರ ಮೋದಿಯವರ ಪೋಸ್ಟರ್ ಗಳನ್ನು ರಾಷ್ಟ್ರ ರಾಜಧಾನಿಯ ದೆಹಲಿಯ ಗೋಡೆಗಳ ಮೇಲೆ ಅಂಟಿಸಲಾಗಿತ್ತು. ಈ ಪೋಸ್ಟರ್ ನಲ್ಲಿ ಮುಗುಳು ನಗೆ ಬೀರುತ್ತಾ, ಕೈ ಮುಗಿಯುತ್ತಿರುವ ಮೋದಿಯವರ ಭಾವಚಿತ್ರವಿದ್ದು, ‘ದಿ ಲೈ ಲಾಮಾ’ ಎಂಬ ಅಡಿ ಬರಹ ನೀಡಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟರ್ ಗಳು ವೈರಲ್ ಆಗ್ತಿದ್ದಂತೆ, ಪೊಲೀಸರು ಈ ಎಲ್ಲಾ ಪೋಸ್ಟರ್ ಗಳನ್ನು ಕಿತ್ತು ಹಾಕಿದ್ದಾರೆ.

ಮೋದಿಯವರ ಈ ಪೋಸ್ಟರ್ ಗಳು ದೆಹಲಿಯ ಮಂದಿರ್ ಮಾರ್ಗ, ಜೆ ಬ್ಲಾಕ್ ಏರಿಯಾ, ಎನ್ ಡಿ ಎಂ ಸಿ ಏರಿಯಾ, ಪಟೇಲ್ ನಗರ್ ಮತ್ತು ಸೆಂಟ್ರಲ್ ದೆಹಲಿಯಲ್ಲಿ ಕಂಡು ಬಂದಿದ್ದವು. ಈ ಪೋಸ್ಟರ್ ವಿರುದ್ಧ ಹಲವಾರು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ರು.

ಇಂದು ಬೆಳಗ್ಗೆ ಪೊಲೀಸರು ಈ ಪೋಸ್ಟರ್ ಗಳನ್ನು ಕಿತ್ತು ಹಾಕಿದ್ದಾರೆ. ಆದ್ರೆ ಈ ಪೋಸ್ಟರ್ ಗಳಲ್ಲಿ ಯಾವುದೇ ಮುದ್ರಣಾಲಯದ ಹೆಸರು ನಮೂದಿಸಿಲ್ಲ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು, ಸ್ಥಳೀಯರ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಸಿಸಿ ಟಿವಿ ದೃಶ್ಯಗಳನ್ನೂ ಪರಿಶೀಲಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...