alex Certify
ಕನ್ನಡ ದುನಿಯಾ       Mobile App
       

Kannada Duniya

ರಸಗುಲ್ಲಾ ಸೃಷ್ಠಿಕರ್ತನಿಗೆ ಸಲ್ಲಿಸಲಾಗುತ್ತಿದೆ ವಿಶೇಷ ಗೌರವ

ಪಶ್ಚಿಮ ಬಂಗಾಳ ಹಲವಾರು ವಿಶೇಷಗಳಿಗೆ ಪ್ರಸಿದ್ಧಿ ಪಡೆದಿದೆ. ಅದರಲ್ಲೊಂದು ರಸಗುಲ್ಲಾ. ಮೂಲತಃ ಪಶ್ಚಿಮ ಬಂಗಾಳದ ತಿನಿಸಾದ ರಸಗುಲ್ಲಾ ರುಚಿಗೆ ಮಾರು ಹೋಗದವರೇ ಇಲ್ಲ.

19 ನೇ ದಶಕದಲ್ಲೇ ಇಂಥ ವಿಶೇಷ ಸಿಹಿ ಪದಾರ್ಥ ಕಂಡುಹಿಡಿದವರು ಪ. ಬಂಗಾಳದ ನೊಬಿನ್ ಚಂದ್ರದಾಸ್. ಇದೀಗ ಭಾರತೀಯ ಅಂಚೆ ಇಲಾಖೆ ನೊಬಿನ್ ಅವರ ಕೊಡುಗೆಗೆ ಪ್ರತಿಯಾಗಿ ಅವರ ಭಾವಚಿತ್ರವನ್ನು ಹೊಂದಿರುವ ವಿಶೇಷ ಕವರ್ ಒಂದನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ.

ರಸಗುಲ್ಲಾ ಅನ್ವೇಷಣೆಯಾಗಿ 150 ವರ್ಷಗಳಾದ ಹಿನ್ನೆಲೆಯಲ್ಲಿ ಹಾಗೂ ರಸಗುಲ್ಲಾ ಪಶ್ಚಿಮ ಬಂಗಾಳದ ತಿನಿಸು ಎಂಬುದಾಗಿ ವಿಶ್ವಮಾನ್ಯತೆ ಪಡೆದ ಹಿನ್ನೆಲೆಯಲ್ಲಿ ಅಂಚೆ ಇಲಾಖೆ ನೊಬಿನ್ ಮುಖಚಿತ್ರ ಹೊಂದಿರುವ ಸ್ಪೆಷಲ್ ಕವರ್ ಜಾರಿಮಾಡುತ್ತಿದೆ. ಶೀಘ್ರದಲ್ಲೇ ಕವರ್ ನ ಡಿಸೈನ್ ಮಾಡಲಾಗುತ್ತದೆ ಎಂದು ಅಂಚೆ ಅಧಿಕಾರಿಗಳು ತಿಳಿಸಿದ್ದಾರೆ. ನೊಬಿನ್ ದಾಸ್ ಅವರ ಮೊಮ್ಮಗ ಇದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಕುಟುಂಬಕ್ಕೆ ಇದೊಂದು ಹೆಮ್ಮೆಯ ಸಂಗತಿ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...