alex Certify
ಕನ್ನಡ ದುನಿಯಾ       Mobile App
       

Kannada Duniya

ಸಖತ್ ಸ್ಪೆಷಲ್ಲಾಗಿದೆ ಭಾರತದಲ್ಲೂ ಲಾಂಚ್ ಆಗಿರೋ ಹೊಸ ಪೋರ್ಷೆ ಕಾರು

ಪೋರ್ಷೆ 911 ಜಿಟಿ3 ಸ್ಪೋರ್ಟ್ ಕಾರು ಕೊನೆಗೂ ಭಾರತಕ್ಕೆ ಬಂದಿದೆ. ಭಾರತದಲ್ಲಿ ಲಾಂಚ್ ಆಗಿರೋ ಈ ಕಾರಿನ ಬೆಲೆ 2.31 ಕೋಟಿ ರೂಪಾಯಿ. 2017ರ ಆರಂಭದಲ್ಲೇ ಪೋರ್ಷೆ ಹೊಸ ಕಾರಿಗಾಗಿ ಬುಕ್ಕಿಂಗ್ ಶುರುವಾಗಿತ್ತು. 911 GT3ಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ.

ಮರ್ಸಿಡಿಸ್, ನಿಸ್ಸಾನ್ ಮತ್ತು ಆಡಿ ಕಾರಿನಲ್ಲಿರುವಂತೆ ಪೋರ್ಷೆ 911 GT3ಯಲ್ಲಿ ಕೂಡ ಲಾಕಿಂಗ್ ಹಾರ್ನ್ ಸೌಲಭ್ಯವಿದೆ. 4 ಲೀಟರ್ 6 ಸಿಲಿಂಡರ್ ಬಾಕ್ಸರ್ ಎಂಜಿನ್ ಅನ್ನು ಇದು ಹೊಂದಿದೆ. 6 ಸ್ಪೀಡ್ ಮ್ಯಾನ್ಯುಯಲ್ ಗೇರ್ ಬಾಕ್ಸ್ ಇದೆ. ಕೇವಲ 3.4 ಸೆಕೆಂಡ್ ಗಳಲ್ಲಿ ಇದು 0-100 ಕಿಮೀ ವೇಗಕ್ಕೆ ತಲುಪಬಲ್ಲದು.

ಈ ಕಾರಿನ ಟಾಪ್ ಸ್ಪೀಡ್ 314 ಕಿಮೀ. ಕಾರ್ ರೇಸ್ ಕ್ರೇಝ್ ಇರುವವರಿಗಂತೂ ಇದು ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ಸಂಸ್ಥೆಯ ಹಿರಿಯ ಅಧಿಕಾರಿಗಳು. ಸ್ಟಾಂಡರ್ಡ್ ಏರಿಯೋ ಪ್ಯಾಕೇಜ್, ದೊಡ್ಡ ಚಕ್ರಗಳು, ಸ್ಮೋಕ್ಡ್ ಹೆಡ್ ಲ್ಯಾಂಪ್ಸ್ ಇದರ ವಿಶೇಷತೆ. ಸೀಟುಗಳನ್ನು ಹೇಗೆ ಬೇಕಾದ್ರೂ ಅಡ್ಜಸ್ಟ್ ಮಾಡಿಕೊಳ್ಳಬಹುದು. ಸ್ಪೋರ್ಟ್ ಸೀಟ್, ಬಕೆಟ್ ಸೀಟ್, ಫೋಲ್ಡೇಬಲ್ ಬ್ಯಾಕ್ ರೆಸ್ಟ್ ಹೀಗೆ ಎಲ್ಲಾ ಆಪ್ಷನ್ ಇದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...