alex Certify
ಕನ್ನಡ ದುನಿಯಾ       Mobile App
       

Kannada Duniya

ಪರಿಸರ ಕಾಳಜಿಗೆ ಹೆಚ್ಚಿನ ಒತ್ತು: ಮತ್ತೊಂದು ರಾಜ್ಯದಲ್ಲೂ ಪಾಲಿಥೀನ್ ಬ್ಯಾನ್

ಉತ್ತರ ಪ್ರದೇಶ, ಮಹಾರಾಷ್ಟ್ರ ನಂತ್ರ ಈಗ ಉತ್ತರಾಖಂಡದ ಸರದಿ. ಉತ್ತರಾಖಂಡದಲ್ಲಿ  ಆಗಸ್ಟ್ 1ರಿಂದ ಪಾಲಿಥಿನ್ ನಿಷೇಧಿಸಲಾಗಿದೆ. ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್, ರಾಜ್ಯದಲ್ಲಿ ಪಾಲಿಥೀನ್ ಬಳಕೆ ಮೇಲೆ ಕಟ್ಟುನಿಟ್ಟಿನ ನಿಷೇಧ ಹೇರಲು ನಿರ್ಧರಿಸಿದ್ದಾರೆ.

ಉತ್ತರಾಖಂಡದಲ್ಲಿ ಪಾಲಿಥೀನ್ ಬಳಕೆ ಕಂಡು ಬಂದಲ್ಲಿ ಅಂಥವರಿಗೆ 500 ರೂಪಾಯಿಯಿಂದ 5 ಸಾವಿರ ರೂಪಾಯಿಯವರೆಗೆ ದಂಡ ವಿಧಿಸಲಾಗುವುದು. ರಾಜ್ಯದ ಜನತೆಗೆ ಪಾಲಿಥೀನ್ ಬಳಕೆ ಮಾಡದಂತೆ ಮನವಿ ಮಾಡಿರುವ ಸಿಎಂ, ಕಟ್ಟುನಿಟ್ಟಿನ ನಿಷೇಧಕ್ಕೆ ಸರ್ಕಾರ ಮುಂದಾಗಿದೆ ಎಂದಿದ್ದಾರೆ.

ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಎಂ, ಜುಲೈ 31ರ ನಂತ್ರ ರಾಜ್ಯದಲ್ಲಿ ಪಾಲಿಥೀನ್ ಬಳಕೆ ಮೇಲೆ ನಿಷೇಧ ಹೇರಲಾಗುವುದು ಎಂದಿದ್ದರು. ಪಾಲಿಥೀನ್ ಬಳಕೆಯಿಂದ ಪರಿಸರ ನಾಶದ ಜೊತೆ ಕೃಷಿ ಹಾಗೂ ಪ್ರಾಣಿ, ಪಕ್ಷಿಗಳ ಮೇಲೆ ಇದು ದುಷ್ಪರಿಣಾಮ ಬೀರ್ತಿದೆ. ರಾಜ್ಯವನ್ನು ಸ್ವಚ್ಛ ಹಾಗೂ ಆರೋಗ್ಯವಾಗಿಡಲು ಪಾಲಿಥೀನ್ ಮೇಲೆ ನಿಷೇಧ ಹೇರುವುದು ಅನಿವಾರ್ಯವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನಕ್ಕೆ ನಾವೆಲ್ಲರೂ ಕೈ ಜೋಡಿಸಬೇಕೆಂದು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...