alex Certify
ಕನ್ನಡ ದುನಿಯಾ       Mobile App
       

Kannada Duniya

ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರಲಿದೆ ದೆಹಲಿ ಹೊಗೆ

New Delhi : Indian commuters at a street of New Delhi which is covered with dense smog as pollution hits hazardous levels on Wednesday. PTI Photo (PTI11_2_2016_000047B)ದೆಹಲಿಯಲ್ಲಿ ವಾಯುಮಾಲಿನ್ಯ ಮಟ್ಟ ಮಿತಿಮೀರಿದೆ. ಈ ವಾಯುಮಾಲಿನ್ಯದಿಂದಾಗಿ ಹೊಸ ಹೊಸ ಖಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ವಿಷಕಾರಿ ಗಾಳಿ ಶಾರೀರಿಕ ಸಂಬಂಧದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಷಪೂರಿತ ಹೊಗೆ ಲೈಂಗಿಕ ಜೀವನದ ಮೇಲೆ ಶೇಕಡಾ 30ರಷ್ಟು ದುಷ್ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಫರ್ಟಿಲಿಟಿ ತಜ್ಞರ ಪ್ರಕಾರ ಗಾಳಿಯಲ್ಲಿ ಕರಗಿದ ಮೆಟಲ್ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ಸೇರ್ಪಡೆಯಾಗಿದ್ದು, ಇದು ನೇರವಾಗಿ ಹಾರ್ಮೋನ್ ಮೇಲೆ ಪರಿಣಾಮ ಬೀರಲಿದೆ. ದೇಶದಲ್ಲಿ ಶೇಕಡಾ 15ರಷ್ಟು ಪುರುಷರು ನಪುಂಸಕತೆಯಿಂದ ಬಳಲುತ್ತಿದ್ದಾರೆ. ಹೊಗೆ ಮಹಿಳೆ ಹಾಗೂ ಪುರುಷರಲ್ಲಿ ನಪುಂಸಕತೆಯ ಮಟ್ಟವನ್ನು ಹೆಚ್ಚು ಮಾಡಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಗಾಳಿಯಲ್ಲಿ ಕರಗಿದ ಹೈಡ್ರೋಕಾರ್ಬನ್, ಸೀಸ ಪಾದರಸ ಹಾರ್ಮೋನುಗಳ ಸಮತೋಲನವನ್ನು ಬಿಗಡಾಯಿಸುವ ಜೊತೆಗೆ ವೀರ್ಯದ ಮೇಲೆ ಪರಿಣಾಮ ಬೀರಲಿದೆ. ಮಾಲಿನ್ಯ, ಲೈಂಗಿಕ ಬಯಕೆ ಕಡಿಮೆ ಮಾಡಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...