alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಲಿನ್ಯ ಮುಕ್ತ ನಗರಕ್ಕಾಗಿ ತೆಲಂಗಾಣದ ಕೈಗಾರಿಕೆಗಳು ಶಿಫ್ಟ್..

telangana

ದಿನೇ ದಿನೇ ಹೆಚ್ಚುತ್ತಿರುವ ಪರಿಸರ ಮಾಲಿನ್ಯಕ್ಕೆ ಬ್ರೇಕ್ ಹಾಕಲು ತೆಲಂಗಾಣ ಸರ್ಕಾರ ಮುಂದಾಗಿದೆ. ಇದಕ್ಕಾಗಿಯೇ 1500 ಕೈಗಾರಿಕೆಗಳನ್ನು ಔಟರ್ ರಿಂಗ್ ರೋಡ್ ವಲಯಕ್ಕೆ ಸ್ಥಳಾಂತರ ಮಾಡಲಿದೆ. ಇದರಿಂದ ರಿಯಲ್ ಎಸ್ಟೇಟ್ ಉದ್ಯಮ ಚಿಗುರಲಿದ್ದು, ವಾಣಿಜ್ಯ ಮಳಿಗೆಗಳ ನಿರ್ಮಾಣ ಹಾಗೂ ಹೌಸಿಂಗ್ ಪ್ರಾಜೆಕ್ಟ್ ಗಳಿಗೆ ಪ್ರೋತ್ಸಾಹ ಸಿಗಲಿದೆ. ಸದ್ಯ ನಗರದ 300 ಎಕರೆ ಪ್ರದೇಶದಲ್ಲಿ 1500 ಕೈಗಾರಿಕೆಗಳಿವೆ, ಅವನ್ನೆಲ್ಲ ನಗರದ ಹೊರಕ್ಕೆ ಶಿಫ್ಟ್ ಮಾಡಿ ಮಾಲಿನ್ಯ ಮುಕ್ತ ಮಾಡುವುದು ಸರ್ಕಾರದ ಮೂಲ ಉದ್ದೇಶ.

ಇದಕ್ಕಾಗಿಯೇ ಸಮಿತಿಯೊಂದನ್ನು ಕೂಡ ರಚನೆ ಮಾಡಲಾಗಿದೆ. 2004ರಲ್ಲೇ ಕೈಗಾರಿಕೆಗಳನ್ನು ಸ್ಥಳಾಂತರ ಮಾಡಲು ಸರ್ಕಾರ ಮುಂದಾಗಿತ್ತು. ಆದ್ರೆ ಕೈಗಾರಿಕೆಗಳಿದ್ದ ಜಾಗದಲ್ಲಿ ಮುಂದೇನು ಮಾಡುವುದು ಎಂಬ ಬಗ್ಗೆ ಸೂಕ್ತ ಯೋಜನೆ ಹಾಕಿಕೊಳ್ಳದೇ ಇದ್ದಿದ್ರಿಂದ ಸ್ಥಳಾಂತರ ಸಾಧ್ಯವಾಗಿರಲಿಲ್ಲ. ಔಷಧ ಹಾಗೂ ಪ್ಲಾಸ್ಟಿಕ್ ಕೈಗಾರಿಕೆಗಳಿಗೆ ಪ್ರತ್ಯೇಕ ಸ್ಥಳ ಒದಗಿಸುವುದಾಗಿ ಸರ್ಕಾರ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...