alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯ ನಾಯಕರಿಗೆ ನಿರಾಸೆ ಮೂಡಿಸಿದ ಆರ್ ಬಿಐ

29_01_2017-cash_limit

ಚುನಾವಣಾ ಆಯೋಗದ ಶಿಫಾರಸ್ಸನ್ನು ಆರ್ ಬಿಐ ತಿರಸ್ಕರಿಸಿದೆ. ಅಭ್ಯರ್ಥಿಗಳ ಹಣ ಡ್ರಾ ಮಿತಿಯನ್ನು ಹೆಚ್ಚಿಸುವಂತೆ ಚುನಾವಣಾ ಆಯೋಗ ಆರ್ ಬಿಐಗೆ ಹೇಳಿತ್ತು. ಆದ್ರೆ ಆರ್ ಬಿಐ ಇದನ್ನು ತಿರಸ್ಕರಿಸಿದ್ದು, ವ್ಯಕ್ತಿಯೊಬ್ಬ ವಾರಕ್ಕೆ 24 ಸಾವಿರ ರೂಪಾಯಿ ಮಾತ್ರ ಡ್ರಾ ಮಾಡಬಹುದೆಂದು ಹೇಳಿದೆ.

ಚುನಾವಣಾ ಕಣಕ್ಕಿಳಿದಿರುವ ಅಭ್ಯರ್ಥಿಗಳಿಗೆ ವಾರವೊಂದಕ್ಕೆ 2 ಲಕ್ಷ ರೂಪಾಯಿಯವರೆಗೆ ಹಣ ಡ್ರಾ ಮಾಡಲು ಅನುಮತಿ ನೀಡುವಂತೆ ಆರ್ ಬಿಐಗೆ ಚುನಾವಣಾ ಆಯೋಗ ಶಿಫಾರಸ್ಸು ಮಾಡಿತ್ತು ಪಂಜಾಬ್, ಉತ್ತರ ಪ್ರದೇಶ, ಗೋವಾ, ಮಣಿಪುರ ಮತ್ತು ಉತ್ತರಖಂಡ್ ನಲ್ಲಿ ಚುನಾವಣೆ ನಡೆಯುತ್ತಿದೆ. ಅಭ್ಯರ್ಥಿಗಳಿಗೆ ಹಣದ ಅವಶ್ಯಕತೆ ಇದೆ. ಪ್ರಚಾರಕ್ಕಾಗಿ ಅಭ್ಯರ್ಥಿಗಳು 28 ಲಕ್ಷ ರೂಪಾಯಿ ಖರ್ಚು ಮಾಡಬಹುದೆಂದು ಚುನಾವಣಾ ಆಯೋಗ ಹೇಳಿದೆ. ಆದ್ರೆ ಆರ್ ಬಿಐ ಮಿತಿ ವಾರಕ್ಕೆ 24 ಸಾವಿರ ಮಾತ್ರ.

ನೋಟು ನಿಷೇಧವಾದ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಅದ್ರ ಬಿಸಿ ಅಭ್ಯರ್ಥಿಗಳಿಗೂ ತಟ್ಟಿದೆ. ಚುನಾವಣೆಗೆ ಬೇಕಾಗುವಷ್ಟು ಹಣ ಡ್ರಾ ಮಾಡಲು ಸಾಧ್ಯವಾಗ್ತಾ ಇಲ್ಲ. ಹಾಗಾಗಿ ಮಿತಿ ಹೆಚ್ಚಿಸುವಂತೆ ಚುನಾವಣಾ ಆಯೋಗ ಜನವರಿ 24 ರಂದು ಆರ್ ಬಿಐಗೆ ಪತ್ರ ಬರೆದು  ಶಿಫಾರಸ್ಸು ಮಾಡಿತ್ತು. ಆದ್ರೆ ಇದಕ್ಕೆ ಆರ್ ಬಿಐನಿಂದ ಇಲ್ಲ ಎಂಬ ಉತ್ತರ ಸಿಕ್ಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...