alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕಾರಣಿಗಳಿಗೆ ಬೇಕು ಏಮ್ಸ್, ಆದರೆ ಅಲ್ಲಿನ ವೈದ್ಯರಲ್ಲ…!

ಚಿಕಿತ್ಸೆಯ ಸಲುವಾಗಿ ಬಹಳಷ್ಟು ರಾಜಕೀಯ ನಾಯಕರು ನವದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಾಗುತ್ತಾರೆ. ಆದರೆ ಚಿಕಿತ್ಸೆಗಾಗಿ ತಮಗೆ ಬೇಕಾದ ವೈಯಕ್ತಿಕ ವೈದ್ಯರನ್ನು ಕರೆತರುತ್ತಾರೆ. ವಿದೇಶಿಯರೂ ಏಮ್ಸ್ ಆಸ್ಪತ್ರೆ ವೈದ್ಯರ ಚಿಕಿತ್ಸೆಗೆ ಮಾರು ಹೋಗಿದ್ದಾರೆ. ವಿಪರ್ಯಾಸವೆಂದರೆ, ಕೆಲ ವಿವಿಐಪಿ ನಾಯಕರಿಗೆ ಏಮ್ಸ್ ಆಸ್ಪತ್ರೆ ವೈದ್ಯರ ಮೇಲೆ ವಿಶ್ವಾಸವಿಲ್ಲ.

2009 ರಲ್ಲಿ ಆಗಿನ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬೈಪಾಸ್ ಶಸ್ತ್ರಚಿಕಿತ್ಸೆ ಮಾಡುವುದಕ್ಕಾಗಿ ಏಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ, ಸಿಂಗ್ ಅವರ ಚಿಕಿತ್ಸೆಗೆಂದು ಏಮ್ಸ್ ಆಸ್ಪತ್ರೆ ವೈದ್ಯರ ಬದಲಾಗಿ ಮುಂಬೈನ ಏಷ್ಯನ್ ಹಾರ್ಟ್ ಇನ್ಸ್ಟಿಟ್ಯೂಟ್ ಆಸ್ಪತ್ರೆಯ ಡಾ. ರಮಾಕಾಂತ್ ಪಾಂಡಾ ಎಂಬುವವರನ್ನು ಕರೆಸಲಾಗಿತ್ತು.

2016 ರಲ್ಲಿ, ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಕಿಡ್ನಿ ಟ್ರಾನ್ಸ್ಪ್ಲಾಂಟ್ ಶಸ್ತ್ರಚಿಕಿತ್ಸೆಗಾಗಿ ಏಮ್ಸ್  ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡರು. ಆದರೆ ಚಿಕಿತ್ಸೆಗಾಗಿ ಡಾ. ಮುಕುತ್ ಮಿಂಜ್ ರನ್ನು ಮೊಹಾಲಿಯಿಂದ ಕರೆಸಲಾಯಿತು. ಅವರು ತಮ್ಮದೇ ಟೀಂ ಕರೆತಂದು ಸುಷ್ಮಾ ಸ್ವರಾಜ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದರು.

ಇತ್ತೀಚೆಗೆ, ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರೂ ಸಹ ಕಿಡ್ನಿ ಟ್ರಾನ್ಸ್ಪ್ಲಾಂಟ್ ಗಾಗಿ ಇದೇ ಏಮ್ಸ್ ಆಸ್ಪತ್ರೆಯನ್ನೇ ಆಯ್ಕೆ ಮಾಡಿಕೊಂಡಿದ್ದರು. ಆದರೆ, ಶಸ್ತ್ರಚಿಕಿತ್ಸೆ ಮಾಡಿದ್ದು ಅಪೋಲೊ ಆಸ್ಪತ್ರೆಯ ವೈದ್ಯರಾದ ಡಾ. ಸಂದೀಪ್ ಗುಲೇರಿಯಾ ಎಂಬುವವರು. ಇದು ಇಂದಿನ ದಿನಗಳಲ್ಲಿ ಮಾಮೂಲಿಯಾಗಿ ಹೋಗಿದೆ. ದೊಡ್ಡ ದೊಡ್ಡ ರಾಜಕಾರಣಿಗಳು ಏಮ್ಸ್ ಆಸ್ಪತ್ರೆಗೆ ಅಡ್ಮಿಟ್ ಆಗುವುದು, ವಿವಿಐಪಿಗಳ ರೀತಿ ಆತಿಥ್ಯ ಪಡೆಯುವುದು ಕೊನೆಗೆ ಬೇರೆ ಆಸ್ಪತ್ರೆ ವೈದ್ಯರಿಂದ ಚಿಕಿತ್ಸೆ ಪಡೆಯುವುದು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಾವು ಅಧಿಕಾರದಲ್ಲಿದ್ದಾಗ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಏಮ್ಸ್ ಆಸ್ಪತ್ರೆಗೆ ಸೇರದೆ, ಖಾಸಗಿ ಆಸ್ಪತ್ರೆಗೆ ಸೇರಿಕೊಂಡು ಖಾಸಗಿ ವೈದ್ಯರ ಬಳಿಯೇ ಚಿಕಿತ್ಸೆಯನ್ನು ಪಡೆದಿದ್ದರು. ಅಷ್ಟೆ ಅಲ್ಲ, ಮಂಡಿ ಚಿಪ್ಪು ಬದಲಿಸುವ ಶಸ್ತ್ರಚಿಕಿತ್ಸೆಯನ್ನು ಕೂಡ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಮಾಡಿಸಿಕೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...