alex Certify
ಕನ್ನಡ ದುನಿಯಾ       Mobile App
       

Kannada Duniya

ಒಮ್ಮೆಯೂ ಚುನಾವಣೆ ಎದುರಿಸಿಲ್ಲ 400 ರಾಜಕೀಯ ಪಕ್ಷ..!

evm-med

ಭಾರತೀಯರಿಗೆ ರಾಜಕೀಯದಲ್ಲಿ ಆಸಕ್ತಿ ಇದೆ. ಚುನಾವಣೆ ಹತ್ತಿರ ಬರ್ತಾ ಇದ್ದಂತೆ ರಾಜಕೀಯ ಕ್ಷೇತ್ರ ಚುರುಕು ಪಡೆಯುತ್ತೆ. ಜೊತೆಗೆ ಚುನಾವಣಾ ಆಯೋಗ ಕೂಡ ಕಾರ್ಯಪ್ರವೃತ್ತವಾಗುತ್ತೆ. ಆಗ ರಾಜಕೀಯ ಪಕ್ಷಗಳ ಬಣ್ಣ ಬಯಲಾಗುತ್ತದೆ.

ಅದೆಷ್ಟೋ ಮಂದಿ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಮಾಡಲು ಪಾರ್ಟಿ ಕಟ್ಟಿದ್ದಾರೆ. ದೇಶದಲ್ಲಿ ಸುಮಾರು 1900 ಪಕ್ಷಗಳಿವೆ. ದುರಂತ ಅಂದ್ರೆ ಅದ್ರಲ್ಲಿ 400 ಪಕ್ಷಗಳು ಇನ್ನೂ ಒಮ್ಮೆಯೂ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.

ಕಪ್ಪು ಹಣವನ್ನು ಬಿಳಿ ಹಣ ಮಾಡಲು ಅನೇಕರು ರಾಜಕೀಯ ಪಕ್ಷ ಕಟ್ಟಿದ್ದಾರೆಂದು ಮುಖ್ಯ ಚುನಾವಣಾ ಆಯುಕ್ತ ಡಾ ನಾಸೀಮ್ ತಿಳಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸದ ಪಕ್ಷವನ್ನು ಪಟ್ಟಿಯಿಂದ ಕಿತ್ತೊಗೆಯುವ ಕೆಲಸದಲ್ಲಿ ಚುನಾವಣಾ ಆಯೋಗ ನಿರತವಾಗಿದೆ. ತೆರಿಗೆ ವಿನಾಯಿತಿ ಹಾಗೂ ಪಕ್ಷಗಳಿಗೆ ಸಿಗುವ ದೇಣಿಗೆಯನ್ನು ಬಂದ್ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ.

ಭವಿಷ್ಯದಲ್ಲಿ ಮತ್ತೊಮ್ಮೆ ಪಕ್ಷಗಳ ನೋಂದಣಿ ಪ್ರಕ್ರಿಯೆ  ನಡೆಯಲಿದೆ. ಮುಖ್ಯ ಚುನಾವಣಾ ಆಯೋಗ ರಾಜ್ಯ ಚುನಾವಣಾ ಆಯೋಗಗಳಿಗೆ ಇಂಥ ಪಕ್ಷಗಳ ಪಟ್ಟಿ ಕಳುಹಿಸುವಂತೆ ಸೂಚನೆ ನೀಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...