alex Certify
ಕನ್ನಡ ದುನಿಯಾ       Mobile App
       

Kannada Duniya

ಸಿನಿಮಾದಂತಿದೆ ಪ್ರೇಯಸಿಗಾಗಿ 67 ದಿನಗಳ ಕಾಲ ಕಾದಿದ್ದ ಕ್ರಿಮಿನಲ್ ಕಥೆ

criminal-love-story

ಕಾನೂನಿನ ಕೈನಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ. ಒಂದಲ್ಲ ಒಂದು ದಿನ ತಪ್ಪು ಮಾಡಿದವರು ಜೈಲು ಸೇರಲೇಬೇಕು. ಇದಕ್ಕೆ ಉತ್ತರ ಪ್ರದೇಶದ ಶಿವಪುರದಲ್ಲಿ ನಡೆದ ಘಟನೆ ಉತ್ತಮ ಉದಾಹರಣೆ. ಆರೋಪಿ ಹಿಡಿಯಲು ಪೊಲೀಸರು ಆತನ ಪ್ರೇಯಸಿ ಹಾಗೂ ಸ್ನೇಹಿತನ ಮೇಲೆ ಸತತ 67 ದಿನಗಳ ಕಾಲ ಕಣ್ಣಿಟ್ಟು ಯಶಸ್ವಿಯಾಗಿದ್ದಾರೆ.

ಘಟನೆ ನಡೆದಿರುವುದು ಮಧ್ಯಪ್ರದೇಶದ ಶಿವಪುರಿಯಲ್ಲಿ. ಎಸ್ಯುವಿ ಕಳ್ಳತನ ಪ್ರಕರಣದಲ್ಲಿ ದರೋಡೆಕೋರ ಮುಖೇಶ್ ಜತವ್ ಹುಡುಕಾಟದಲ್ಲಿದ್ದರು. ಈ ಮುಖೇಶ್ 40ಕ್ಕೂ ಹೆಚ್ಚು ಐಷಾರಾಮಿ ಹಾಗೂ ಎಸ್ಯುವಿ ಕಾರುಗಳನ್ನು ಕಳ್ಳತನ ಮಾಡಿದ್ದಾನೆ. ಪ್ರತಿಯೊಂದು ಪ್ರಕರಣದಲ್ಲೂ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದ.

ಮೇ15ರಂದು ಟಾಟಾ ಸಫಾರಿ ಕಳ್ಳತನವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖೇಶ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ರು. ಮುಖೇಶ್, ಗ್ವಾಲಿಯರ್ ನಲ್ಲಿ ವಾಸವಾಗಿರುವ ಮದುವೆಯಾದ ಮಹಿಳೆ ಜೊತೆ ಸಂಬಂಧ ಹೊಂದಿದ್ದಾನೆಂಬ ವಿಷ್ಯ ಪೊಲೀಸರಿಗೆ ತಿಳಿದಿದೆ.

ಕಳೆದ 67 ದಿನಗಳಿಂದ ಮುಖೇಶ್ ಪ್ರೇಯಸಿ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಜೈಲು ಸೇರಿದ್ದ ಸ್ನೇಹಿತನನ್ನು ಬಿಡಿಸಲು ಮುಖೇಶ್ ಪ್ರೇಯಸಿ ನೆರವು ಕೋರಿದ್ದ. 67 ದಿನಗಳವರೆಗೆ ಪ್ರೇಯಸಿಯಿಂದ ದೂರವಿದ್ದ ಮುಖೇಶ್ ಪೊಲೀಸರು ತನ್ನನ್ನು ಮರೆತಿದ್ದಾರೆಂದು ಭಾವಿಸಿ ಭೇಟಿಗೆ ಬಂದಿದ್ದಾನೆ. ಈ ವೇಳೆ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...