alex Certify
ಕನ್ನಡ ದುನಿಯಾ       Mobile App
       

Kannada Duniya

ತೂತುಕುಡಿ ಪ್ರತಿಭಟನೆ: ವಿಡಿಯೋ ಸಂದೇಶ ರವಾನಿಸಿದ ರಜನಿಕಾಂತ್

ತಮಿಳುನಾಡಿದ ತೂತುಕುಡಿಯಲ್ಲಿ ಹಿಂಸಾರೂಪದ ಪ್ರತಿಭಟನೆ ಮುಂದುವರೆದಿದೆ. ಮೂಲಗಳ ಪ್ರಕಾರ ಪ್ರತಿಭಟನಾಕಾರರು ಎರಡು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಸ್ಟರ್ಲೈಟ್ ಕಾಪರ್ ಕಂಪನಿ ಮುಚ್ಚುವಂತೆ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ನಿನ್ನೆ ಗೋಲಿಬಾರ್ ನಡೆದಿತ್ತು. ಅದನ್ನು ವಿರೋಧಿಸಿ ಇಂದು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ.

ಇತ್ತ ಸೂಪರ್ ಸ್ಟಾರ್ ರಜನಿಕಾಂತ್ ವಿಡಿಯೋ ಸಂದೇಶವೊಂದನ್ನು ಕಳುಹಿಸಿದ್ದಾರೆ. ಟ್ವೀಟರ್ ನಲ್ಲಿ ಪೀಡಿತ ಕುಟುಂಬಗಳಿಗೆ ಸಾಂತ್ವಾನ ಹೇಳಿದ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಸಲು ಸರ್ಕಾರ ಮುಂದಾಗಿದೆ. ನಿವೃತ್ತ ನ್ಯಾಯಾಧೀಶ ಅರುಣ್ ಜಗದೀಶ್ ಅವರನ್ನು ತನಿಖೆ ನಡೆಸಲು ನೇಮಕ ಮಾಡಿದೆ.

ಮದ್ರಾಸ್ ಹೈಕೋರ್ಟ್, ಮಧುರೈನಲ್ಲಿ ನಿರ್ಮಾಣವಾಗಬೇಕಿದ್ದ ಸ್ಟರ್ಲೈಟ್ ಘಟಕಕ್ಕೆ ತಡೆ ನೀಡಿದೆ. ತಮಿಳುನಾಡಿದ ಬೇರೆ ಪ್ರದೇಶಗಳಲ್ಲಿ ಕೂಡ ಪ್ರತಿಭಟನೆ ನಡೆಯುತ್ತಿದೆ. ಪೊಲೀಸ್ ಗುಂಡಿಗೆ ಇಂದು ಒಬ್ಬ ಬಲಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ.

ಇತ್ತ ಗೋಲಿಬಾರ್ ವೇಳೆ ಗಾಯಗೊಂಡವರನ್ನು ಭೇಟಿಯಾಗಲು ಕಮಲ್ ಹಾಸನ್ ಮುಂದಾಗಿದ್ದಾರೆ. ತೂತುಕುಡಿ ಆಸ್ಪತ್ರೆಗೆ ಬಂದ ಕಮಲ್ ವಿರುದ್ಧ ದೂರು ದಾಖಲಾಗಿದೆ. ತೂತುಕುಡಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ಆದ್ರೂ ಆಸ್ಪತ್ರೆಗೆ ಬಂದ ಕಮಲ್ ಹಾಸನ್ ವಿರುದ್ಧ ದೂರು ದಾಖಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...