alex Certify
ಕನ್ನಡ ದುನಿಯಾ       Mobile App
       

Kannada Duniya

2 ವರ್ಷಗಳಿಂದ ಫ್ರಿಜ್ ನಲ್ಲಿತ್ತು ತಾಯಿಯ ಶವ

ಕೊಲ್ಕತ್ತಾದಲ್ಲಿ ದಂಗಾಗಿಸುವ ಘಟನೆಯೊಂದು ನಡೆದಿದೆ. ಬೆಹಾಲಾ ಪ್ರದೇಶದ ಮನೆಯೊಂದರ ಫ್ರಿಜ್ ನಲ್ಲಿದ್ದ ಮಹಿಳೆ ಶವವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸ್ ಮಾಹಿತಿ ಪ್ರಕಾರ ಕಳೆದ 2 ತಿಂಗಳಿಂದ ಮಹಿಳೆ ಶವ ಫ್ರಿಜ್ ನಲ್ಲಿತ್ತು ಎನ್ನಲಾಗಿದೆ. ಆಕೆ ಮಗನೇ ಶವವನ್ನು ಫ್ರಿಜ್ ನಲ್ಲಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಳ ಮಗ ಹಾಗೂ ಪತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

ತಾಯಿ ಪಿಂಚಣಿ ಪಡೆಯುವ ಆಸೆಗೆ ಮಗ ಹೀಗೆ ಮಾಡಿದ್ದ ಎನ್ನಲಾಗಿದೆ. ತಾಯಿ ಶವವನ್ನು ಫ್ರಿಜ್ ನಲ್ಲಿಟ್ಟು ಎರಡು ತಿಂಗಳಿಂದ ತಾಯಿಯ ಪಿಂಚಣಿಯನ್ನು ಮಗ ಪಡೆಯುತ್ತಿದ್ದನಂತೆ. ಮೃತ 87 ವರ್ಷದ ಬಿನಾ ಸರ್ಕಾರಿ ಉದ್ಯೋಗಿಯಾಗಿದ್ದಳು. ನಿವೃತ್ತಿ ನಂತ್ರ ಪಿಂಚಣಿ ಹಣದಲ್ಲಿ ಪತಿ ಜೊತೆ ಜೀವನ ಸಾಗಿಸುತ್ತಿದ್ದಳು. 2015ರಲ್ಲಿ ಬಿನಾಗೆ ಹೃದಯಾಘಾತವಾಗಿದೆ. ಅಂತಿಮ ಸಂಸ್ಕಾರದ ಹೆಸರಲ್ಲಿ ತಾಯಿ ಶವವನ್ನು ಮನೆಗೆ ತಂದ ಮಗ ಫ್ರಿಜ್ ನಲ್ಲಿಟ್ಟಿದ್ದಾನೆ. ಆತನಿಗೆ 89 ವರ್ಷದ ತಂದೆ ಸಾಥ್ ನೀಡಿದ್ದಾನೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...