alex Certify
ಕನ್ನಡ ದುನಿಯಾ       Mobile App
       

Kannada Duniya

ಡ್ಯಾನ್ಸ್ ಬಾರ್ ಮೇಲೆ ದಾಳಿ ಮಾಡಿದ ಪೊಲೀಸರೇ ಅಲ್ಲಿನ ದೃಶ್ಯ ಕಂಡು ಬೆಚ್ಚಿ ಬಿದ್ರು

ಮುಂಬೈನ ಡ್ಯಾನ್ಸ್ ಬಾರ್ ಒಂದರ ಮೇಲೆ ದಾಳಿ ನಡೆಸಿದ ಪೊಲೀಸರು ಅಲ್ಲಿನ ದೃಶ್ಯ ಕಂಡು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಉಸಿರಾಡಲೂ ಸಾಧ್ಯವಾಗದಂತಹ ಅತ್ಯಂತ ಕಿರಿದಾದ ಕೋಣೆಯಲ್ಲಿ 16 ಮಂದಿ ಯುವತಿಯರನ್ನು ಅಡಗಿಸಿಟ್ಟಿರುವುದು ದಾಳಿ ವೇಳೆ ಪತ್ತೆಯಾಗಿದೆ.

ಬುಧವಾರದಂದು ಜೋಗೇಶ್ವರಿಯ ಎಸ್.ವಿ. ರಸ್ತೆಯಲ್ಲಿರುವ ನಿತ್ಯಾನಂದ ಬಾರ್ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಈ ದೃಶ್ಯ ಕಂಡು ಬಂದಿದೆ. ಆರ್ಕೆಸ್ಟ್ರಾ ಹೆಸರಿನಲ್ಲಿ ಲೈಸೆನ್ಸ್ ಪಡೆದಿದ್ದ ಬಾರ್ ಮಾಲೀಕ ಡ್ಯಾನ್ಸ್ ಬಾರ್ ನಡೆಸುತ್ತಿರುವುದರ ಕುರಿತು ತಮಗೆ ಬಂದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.

ದಾಳಿ ಸಂದರ್ಭದಲ್ಲಿ ಪರಿಶೀಲನೆ ನಡೆಸುವಾಗ ಪೊಲೀಸರಿಗೆ ನೆಲ ಮಾಳಿಗೆಯೊಂದು ಕಂಡು ಬಂದಿದೆ. ಅದರೊಳಗಿಳಿದ ಪೊಲೀಸರಿಗೆ ಕಂಡು ಬಂದಿದ್ದು ಮಾತ್ರ ಬೆಚ್ಚಿ ಬೀಳಿಸುವ ದೃಶ್ಯ. ಅತ್ಯಂತ ಕಿರಿದಾದ ಕೋಣೆಯಲ್ಲಿ 16 ಮಂದಿ ಯುವತಿಯರನ್ನು ಅಡಗಿಸಿಡಲಾಗಿದ್ದು ಕಂಡು ಬಂದಿದೆ. ಪೊಲೀಸರ ದಾಳಿಯನ್ನು ಸಿಸಿ ಟಿವಿಯಲ್ಲಿ ಕಂಡ ಬಾರ್ ಮಾಲೀಕ, ಯುವತಿಯರನ್ನು ಅಲ್ಲಿ ಅಡಗಿಸಿಟ್ಟಿದ್ದನೆನ್ನಲಾಗಿದ್ದು, ಪೊಲೀಸರು ಹೋಗುವುದು ತಡವಾಗಿದ್ದರೆ ಅವರುಗಳು ಉಸಿರುಗಟ್ಟಿ ಹೋಗುತ್ತಿದ್ದರೆನ್ನಲಾಗಿದೆ.

10 ಮಂದಿ ಬಾರ್ ಸಿಬ್ಬಂದಿ 20 ಗ್ರಾಹಕರನ್ನು ವಶಕ್ಕೆ ಪಡೆದಿರುವ ಪೊಲೀಸರು ಯುವತಿಯರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುಪರ್ದಿಗೆ ಒಪ್ಪಿಸಿದ್ದಾರೆ. ತಲೆಮರೆಸಿಕೊಂಡಿರುವ ಬಾರ್ ಮಾಲೀಕನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...