alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿಯಲ್ಲಿ ಪ್ರತಿಭಟನೆಗೆ ಮಾರ್ಗಸೂಚಿ ಫಿಕ್ಸ್…!

ಸುಪ್ರೀಂ ಕೋರ್ಟ್ ಸೂಚನೆಯಂತೆ, ದೆಹಲಿ ಪೊಲೀಸರು ಪ್ರತಿಭಟನಾ ಸ್ಥಳಗಳಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಇದ್ರಂತೆ ಜಂತರ್ ಮಂತರ್ ನಲ್ಲಿ 1000 ಜನ, ಸಂಸತ್ ರಸ್ತೆಯಲ್ಲಿ 2000 ಜನ, ಬೋಟ್ ಕ್ಲಬ್ ನಲ್ಲಿ 100 ಜನರಿಗೆ ಮಾತ್ರ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗುತ್ತದೆ.

ಪ್ರತಿಭಟನೆ ನಡೆಸುವಾಗ ಯಾವುದೇ ಮಾರಕಾಸ್ತ್ರ ತರುವಂತಿಲ್ಲ. ಇಷ್ಟೇ ಅಲ್ಲದೆ ಪ್ರತಿಮೆ ದಹನ ಹಾಗೂ ಕಾಗದಗಳನ್ನು ಸುಡಲು ನಿರ್ಬಂಧ ಹೇರಲಾಗಿದೆ. ಜಂತರ್ ಮಂತರ್ ನಲ್ಲಿ ಒಂದು ದಿನಕ್ಕೆ ಕೇವಲ ಎರಡು ಪ್ರತಿಭಟನೆಗೆ ಅವಕಾಶ ನೀಡಲಾಗುವುದು.

ಬೆಳಿಗ್ಗೆ 11 ರಿಂದ ಸಾಯಂಕಾಲ 4 ರ ವರೆಗೆ ಮಾತ್ರ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಲಾಗಿದೆ. ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಾದಲ್ಲಿ ರಾಮ್ ಲೀಲಾ ಮೈದಾನದಲ್ಲಿ ಸ್ಥಳಾವಕಾಶ ಕಲ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ರಾಮ್ ಲೀಲಾ ಮೈದಾನದಲ್ಲಿ ಸುಮಾರು 50 ಸಾವಿರ ಜನ ಪ್ರತಿಭಟಿಸಲು ಅವಕಾಶ ನೀಡಲಾಗಿದೆ. ಪೊಲೀಸರು ಸಿದ್ಧಪಡಿಸಿರುವ ಮಾರ್ಗಸೂಚಿಗಳನ್ನು ಈ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...