alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಪುರ್ ನಲ್ಲಿ ಕೊಲೆ, ದೆಹಲಿಯಲ್ಲಿ ಸಿಗ್ತು ಹೆಣ ತುಂಬಿದ್ದ ಸೂಟ್ ಕೇಸ್

ರಾಜಸ್ತಾನದ ರಾಜಧಾನಿ ಜೈಪುರದಲ್ಲಿ ಅಪಹರಣ ಹಾಗೂ ಹತ್ಯೆಯ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬನ ಸ್ನೇಹ ಬೆಳೆಸಿದ ಮಹಿಳೆಯೊಬ್ಬಳು ತನ್ನ ಸ್ನೇಹಿತರ ಸಹಾಯದಿಂದ ಆತನನ್ನು ಅಪಹರಿಸಿದ್ದಾಳೆ. ನಂತ್ರ 10 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆಯಿಟ್ಟಿದ್ದಾಳೆ.

ಪೊಲೀಸ್ ಮಾಹಿತಿ ಪ್ರಕಾರ ಮೇ.3ರಂದು ಅಪಹರಿಸಿದ ವ್ಯಕ್ತಿಯನ್ನು ಕೊಲೆ ಮಾಡಿ ಸೂಟ್ ಕೇಸ್ ನಲ್ಲಿ ಶವವನ್ನು ತುಂಬಿ ನಿರ್ಜನ ಪ್ರದೇಶದಲ್ಲಿ ಎಸೆಯಲಾಗಿದೆ. ಆಶ್ಚರ್ಯದ ವಿಚಾರವೆಂದ್ರೆ ಅಲ್ಲಿ ಎಸೆದ ಸೂಟ್ ಕೇಸ್ ದೆಹಲಿಯಲ್ಲಿ ಸಿಕ್ಕಿದೆ. ಅದು ದೆಹಲಿಗೆ ಹೇಗೆ ಬಂತು ಎಂಬ ಮಾಹಿತಿ ಸಿಕ್ಕಿಲ್ಲ.

ಪ್ರಿಯಾ ಸೇಠ್ ಎಂಬಾಕೆ ಮೃತ ದುಷ್ಯಂತನ ಸ್ನೇಹ ಬೆಳೆಸಿದ್ದಳು. ತನ್ನಿಬ್ಬರು ಸ್ನೇಹಿತರ ಜೊತೆ ಸೇರಿ ದುಷ್ಯಂತನನ್ನು ಅಪಹರಿಸಿದ್ದಳು. ಪ್ರಿಯಾ ಕೇಳಿದ 10 ಲಕ್ಷ ರೂಪಾಯಿ ನೀಡಲು ದುಷ್ಯಂತ್ ನಿರಾಕರಿಸಿದ್ದಾನೆ. ಕೋಪಗೊಂಡ ಪ್ರಿಯಾ ಕೊಲೆ ಮಾಡಿದ್ದಾಳೆ. ಪ್ರಿಯಾ ಮೊದಲು ದುಷ್ಯಂತನ ಅಕೌಂಟ್ ನಿಂದ 20 ಸಾವಿರ ರೂಪಾಯಿ ಡ್ರಾ ಮಾಡಿದ್ದಾಳೆ. ನಂತ್ರ ತಂದೆಗೆ ಬೆದರಿಸಿ ಹಣ ಹಾಕುವಂತೆ ಹೇಳಿದ್ದಾಳೆ. ದುಷ್ಯಂತನ ತಂದೆ ಹಣ ಹೊಂದಿಸುವ ಯತ್ನದಲ್ಲಿದ್ದರು ಎನ್ನಲಾಗಿದೆ. ದುಷ್ಯಂತ್ ಕೊಲೆಗೆ ಕಾರಣ ಸರಿಯಾಗಿ ತಿಳಿದುಬಂದಿಲ್ಲ. ಪ್ರಿಯಾ ಅಪರಾಧಿ ಹಿನ್ನೆಲೆ ಹೊಂದಿದ್ದು ತನಿಖೆ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...