alex Certify
ಕನ್ನಡ ದುನಿಯಾ       Mobile App
       

Kannada Duniya

ನಿವೃತ್ತಿಗೂ ಒಂದು ದಿನ ಮುಂಚೆ ಪೊಲೀಸ್ ಅಧಿಕಾರಿ ಸಸ್ಪೆಂಡ್

p

ಇನ್ನೊಂದು ದಿನ ಕಳೆದ್ರೆ ಪೊಲೀಸ್ ಅಧಿಕಾರಿ ವಿನ್ಸೆಂಟ್ ಜೋಸೆಫ್ ಅವರಿಗೆ ಅದ್ಧೂರಿ ಬೀಳ್ಕೊಡುಗೆಯಿತ್ತು. ಅವರ ನಿವೃತ್ತಿಗೆ ಒಂದು ದಿನ ಮಾತ್ರ ಬಾಕಿಯಿತ್ತು. ಆದ್ರೆ ವಿನ್ಸೆಂಟ್ ಜೋಸೆಫ್ ಅವರ ನಿರ್ಗಮನ ಮಾತ್ರ ಎಲ್ಲರೂ ಅಂದುಕೊಂಡಂತೆ ಸಂಭ್ರಮದ ಕ್ಷಣವಾಗಿರಲಿಲ್ಲ.

ಅಂತರ ರಾಜ್ಯ ಮಾದಕ ವಸ್ತುಗಳ ಕಳ್ಳಸಾಗಣೆ ಜಾಲದಲ್ಲಿ ಶಾಮೀಲಾಗಿದ್ದ ಅವರನ್ನು ಅಮಾನತು ಮಾಡಲಾಗಿದೆ. ಕಾಸರಗೋಡಿನಲ್ಲಿ 2014ರಲ್ಲಿ ಅಬಕಾರಿ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಹಶೀಶ್ ಸ್ಮಗ್ಲಿಂಗ್ ಮಾಡುತ್ತಿದ್ದವನೊಬ್ಬ ಸಿಕ್ಕಿಬಿದ್ದಿದ್ದ. ಪೊಲೀಸ್ ಅಧಿಕಾರಿಯೇ ತನಗೆ ಡ್ರಗ್ಸ್ ಸಪ್ಲೈ ಮಾಡಿರೋದಾಗಿ ಆತ ಬಾಯ್ಬಿಟ್ಟಿದ್ದ.

ಆಗಿನಿಂದ್ಲೂ ಇಲಾಖೆ ವಿನ್ಸೆಂಟ್ ಜೋಸೆಫ್ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ನಂತರ ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ವಿನ್ಸೆಂಟ್ ಅಕ್ರಮವನ್ನು ಪತ್ತೆ ಮಾಡಿದ್ದಾರೆ. ಅನಾರೋಗ್ಯದ ನೆಪದಲ್ಲಿ ಆಗಾಗ ಬೇರೆ ರಾಜ್ಯಗಳಿಗೆ ಪ್ರಯಾಣಿಸುತ್ತಿದ್ದ ಜೋಸೆಫ್, ಅಲ್ಲಿ ಡ್ರಗ್ ಡೀಲರ್ ಗಳನ್ನು ಸಂಪರ್ಕಿಸ್ತಾ ಇದ್ರು. 15 ದಿನಗಳ ಹಿಂದಷ್ಟೆ ಈ ಬಗ್ಗೆ ಸ್ಪಷ್ಟನೆ ಕೊಡುವಂತೆ ವಿನ್ಸೆಂಟ್ ಜೋಸೆಫ್ ಗೆ ಸೂಚಿಸಲಾಗಿತ್ತು. ಅವರು ನೀಡಿದ ಸ್ಪಷ್ಟನೆ ತೃಪ್ತಿದಾಯಕವಾಗಿಲ್ಲದ ಕಾರಣ ಸೇವೆಯಿಂದ ಅಮಾನತು ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...