alex Certify
ಕನ್ನಡ ದುನಿಯಾ       Mobile App
       

Kannada Duniya

ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ ನಟಿಯ ಆತ್ಮಹತ್ಯೆ ಪ್ರಕರಣ

banerjee_123‘ಬಾಲಿಕಾ ವಧು’ ಖ್ಯಾತಿಯ ನಟಿ ಪ್ರತ್ಯುಷಾ ಬ್ಯಾನರ್ಜಿ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ‘ಬಿಗ್ ಬಾಸ್’ ಹಾಗೂ ‘ಪವರ್ ಕಪಲ್’ ರಿಯಾಲಿಟಿ ಷೋ ಗಳಲ್ಲಿ ಭಾಗವಹಿಸಿ ಹಣ ಗಳಿಸಿದ್ದ ಈಕೆಯ ಬ್ಯಾಂಕ್ ಖಾತೆಯಲ್ಲಿ ಈಗ ಝೀರೋ ಬ್ಯಾಲೆನ್ಸ್ ಇರುವ ಸಂಗತಿ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಈ ರಿಯಾಲಿಟಿ ಷೋ ಗಳಲ್ಲಿ ಪ್ರತ್ಯುಷಾ, ತನ್ನ ಬಾಯ್ ಫ್ರೆಂಡ್ ರಾಹುಲ್ ರಾಜ್ ಸಿಂಗ್ ಜೊತೆ ಭಾಗವಹಿಸಿದ್ದು, ಆಕೆಯ ಖಾತೆಯಲ್ಲಿದ್ದ ಸುಮಾರು 24 ಲಕ್ಷ ರೂ. ಹಣವನ್ನು ಯಾರು ಪಡೆದುಕೊಂಡಿದ್ದಾರೆಂಬುದರ ಕುರಿತು ಪೊಲೀಸರು ಈಗ ತನಿಖೆಗೆ ಮುಂದಾಗಿದ್ದಾರೆ. ಅಲ್ಲದೇ ಪ್ರತ್ಯುಷಾಗೆ ಸೇರಿದ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ರಾಹುಲ್ ಬಳಸುತ್ತಿದ್ದನೆಂಬ ಸಂಗತಿ ಕೂಡಾ ಬಯಲಾಗಿದೆ.

ಈ ಮಧ್ಯೆ ಏಪ್ರಿಲ್ 1 ರಂದು ಪ್ರತ್ಯುಷಾ ಬ್ಯಾನರ್ಜಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಆನಾರೋಗ್ಯದ ಕಾರಣಕ್ಕಾಗಿ ಆಸ್ಪತ್ರೆ ಸೇರಿರುವ ರಾಹುಲ್ ರಾಜ್ ಸಿಂಗ್, ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಳ್ಳಿ ಹಾಕಿದೆ. ಪ್ರತ್ಯುಷಾ ಬ್ಯಾನರ್ಜಿ ಪೋಷಕರ ಪರ ವಕೀಲರು, ಪ್ರತ್ಯುಷಾಳದ್ದು ಆತ್ಮಹತ್ಯೆಯಲ್ಲ. ಆದೊಂದು ಪೂರ್ವ ನಿಯೋಜಿತ ಹತ್ಯೆ ಎಂದು ಹೇಳಿದ್ದಾರಲ್ಲದೇ ರಾಹುಲ್ ಈ ಹಿಂದೆಯೂ 7 ಮಂದಿ ಮಹಿಳೆಯರನ್ನು ವಂಚಿಸಿದ್ದಾನೆಂದು ಆರೋಪಿಸಿದ್ದಾರೆ. ಪೊಲೀಸರು, ಪ್ರತ್ಯುಷಾ ಹಾಗೂ ರಾಹುಲ್ ರಾಜ್ ಸಿಂಗ್ ರ ಮೊಬೈಲ್ ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅಳಿಸಿರಬಹುದಾದ ದಾಖಲೆಗಳನ್ನು ಮರು ಸಂಗ್ರಹಿಸುವ ಯತ್ನ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...