alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಕೊಲೆ ಸಂಚು ರೂಪಿಸಿದ್ದ 10 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್

ಪ್ರಧಾನಿ ನರೇಂದ್ರ ಮೋದಿಯವರ ಕೊಲೆಗೆ ಸಂಚು ರೂಪಿಸಿದ್ದ ಹತ್ತು ಆರೋಪಿಗಳ ವಿರುದ್ಧ ಪುಣೆ ಪೊಲೀಸರು ವಿಶೇಷ ಕಾನನೂನುಬಾಹಿರ ಚಟುವಟಿಕೆ(ನಿಯಂತ್ರಣ) ಕಾಯಿದೆ(ಯುಎಪಿಎ) ಕೋರ್ಟ್ ಗೆ 5160 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

2017ರ ಡಿಸೆಂಬರ್ ನಲ್ಲಿ ಪುಣೆಯಲ್ಲಿ ಹಮ್ಮಿಕೊಂಡಿದ್ದ ಎಲ್ಗರ್ ಪರಿಷದ್ ನಡೆಸುವ ಸಲುವಾಗಿ ಈ ಮಾವೋವಾದಿಗಳು ಅಕ್ರಮವಾಗಿ ಹಣ ಹೂಡಿದ್ದರು ಎಂದು ಪೊಲೀಸರು ಆರೋಪಿದ್ದಾರೆ.

ಆರೋಪ ಪಟ್ಟಿ ಸಲ್ಲಿಕೆಯಾಗಿರುವ 10 ಆರೋಪಿಗಳಲ್ಲಿ ಸುಧೀರ್ ಧಾವಳೆ, ರೋನಾ ವಿಲ್ಸನ್, ಸುರೇಂದ್ರ ಗದ್ಲಿಂಗ್, ಶೋಮಾ ಸೇನ್ ಮತ್ತು ಮಹೇಶ್ ರಾವತ್ ಅವರು ಈಗ ಯರವಾಡ ಜೈಲಿನಲ್ಲಿದ್ದಾರೆ. ಎಲ್ಗರ್ ಪರಿಷದ್ ವೇಳೆ ನಡೆದ ಹಿಂಸಾಚಾರದಲ್ಲಿ ಆರೋಪಿಗಳಾದ ಇವರನ್ನು ಜೂನ್ 6ರಂದು ಬಂಧಿಸಲಾಗಿತ್ತು.

ಇನ್ನುಳಿದ ಐವರಾದ ಪ್ರಶಾಂತ್ ಬೋಸ್ ಕಿಶಾಂಡ, ಪ್ರಕಾಶ್ ಅಲಿಯಾಸ್ ರಿತುಪರ್ಣಾ ಗೋಸ್ವಾಮಿ, ಕಾಮ್ರೆಡ್ ಎಂ, ಅಲಿಯಾಸ್ ದೀಪಕ್ ಅಲಿಯಾಸ್ ಮಿಲಿಂದ್ ತೆಲ್ಟುಂಮ್ಡೆ, ದೀಪು ಅವರು ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆ ಜೊತೆ ಸಂಬಂಧ ಹೊಂದಿದ್ದರು ಎಂಬ ಕಾರಣಕ್ಕೆ ಆಗಸ್ಟ್ 28ರಂದು ಬಂಧಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ಪುಣೆ ಜಿಲ್ಲಾ ಸರ್ಕಾರಿ ವಕೀಲರ ಮನವಿ ಮೇರೆಗೆ ಅಕ್ಟೋಬರ್ 29ರಂದು ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಬಂಧಿತರಾಗಿರುವ ಐವರು ಸಹಜವಾಗಿ ಜಾಮೀನು ಪಡೆಯುವ ಸಾಧ್ಯತೆಗಳಿರುವುದರಿಂದ ಈ ಪ್ರಕರಣದ ಚಾರ್ಜ್ ಶೀಟ್ ಅನ್ನು ಇದೀಗ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಯುಎಪಿಎ ಕೋರ್ಟ್ ನ್ಯಾಯಾಧೀಶ ಕೆ.ಡಿ. ವದನೆ ಅವರಿಗೆ ಸಲ್ಲಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...