alex Certify
ಕನ್ನಡ ದುನಿಯಾ       Mobile App
       

Kannada Duniya

ಠಾಣೆಯಲ್ಲೇ ಡಿಜೆ ಪಾರ್ಟಿ, ಪೊಲೀಸರ ಭರ್ಜರಿ ‘ಡ್ಯಾನ್ಸ್’

poli dance

ನೊಂದವರಿಗೆ ನೆರವು ನೀಡಿ, ಅಪರಾಧಿಗಳು, ಆರೋಪಿಗಳಿಗೆ ಎಚ್ಚರಿಕೆಯ ಪಾಠ ಕಲಿಸಬೇಕಾದ ಪೊಲೀಸರೇ ಕೆಲವೊಮ್ಮೆ ಇನ್ನೊಬ್ಬರಿಂದ ಬುದ್ಧಿ ಹೇಳಿಸಿಕೊಳ್ಳಬೇಕಾದ ಪ್ರಸಂಗ ಎದುರಾಗುತ್ತದೆ. ಕಳೆದ ವಾರವಷ್ಟೇ ಕೋಲಾರ ಜಿಲ್ಲೆಯ ಠಾಣೆಯಲ್ಲಿ ದರೋಡೆಕೋರರಿಂದ ನಾಗಿಣಿ ಡ್ಯಾನ್ಸ್ ಮಾಡಿಸಿದ್ದು, ಸುದ್ದಿಯಾಗಿತ್ತು.

ಇದೀಗ ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಪೊಲೀಸರೇ ಠಾಣೆಯಲ್ಲಿ ಭರ್ಜರಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಠಾಣೆಯಲ್ಲೇ ಡಿಜೆ ಪಾರ್ಟಿ ಮಾಡಿ ವಿವಾದಕ್ಕೆ ಸಿಲುಕಿದ್ದಾರೆ. ಬುಲಂದ್ ಶಹರ್ ಕಾಕೋರ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಪೇದೆಯೊಬ್ಬರು ನಿವೃತ್ತರಾಗಿದ್ದರು. ಈ ಹಿನ್ನೆಲೆಯಲ್ಲಿ ಠಾಣೆಯಲ್ಲಿ ಡಿಜೆ ಪಾರ್ಟಿ ಆಯೋಜಿಸಿದ್ದು, ಪಾರ್ಟಿಗೆ ಬಂದವರೆಲ್ಲಾ ಫುಲ್ ಟೈಟಾಗಿ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಜೋಶ್ ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಪೊಲೀಸರೊಬ್ಬರು ನಿವೃತ್ತರಾಗಿದ್ದಕ್ಕೆ ಠಾಣೆಯಲ್ಲೇ ಡಿಜೆ ಪಾರ್ಟಿ ಏರ್ಪಡಿಸಿ ಭರ್ಜರಿ ಡ್ಯಾನ್ಸ್ ಮಾಡಿದ ವಿಡಿಯೋ ವಾಹಿನಿಗಳಲ್ಲಿ ಪ್ರಸಾರವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುತ್ತಿದೆ. ಪೊಲೀಸರ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...