alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರಾಯಿ ಕುಡಿದು ಫುಲ್ ಟೈಟ್ ಆಗ್ತಿವೆ ಇಲಿಗಳು..!

w_1493959688_749x421

ಈ ಸುದ್ದಿ ಸ್ವಲ್ಪ ವಿಚಿತ್ರವೆನಿಸಿದ್ರೂ ಸತ್ಯ. ಬಿಹಾರದಲ್ಲಿ ಕಳೆದ ಒಂದು ವರ್ಷದಿಂದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮನುಷ್ಯರು ಮದ್ಯ ಸೇವನೆ ಬಿಟ್ಟಿದ್ದಾರೆ. ಆದ್ರೆ ಇಲಿಗಳು ಈ ದುಶ್ಚಟಕ್ಕೆ ದಾಸರಾಗಿದ್ದಾರೆ. ಹಾಗಂತ ನಾವು ಹೇಳ್ತಿಲ್ಲ. ಪಾಟ್ನಾ ಪೊಲೀಸರು ಎಸ್ಎಸ್ಪಿ ಮನು ಮಹಾರಾಜನ್ ಗೆ ಹೇಳಿದ್ದಾರೆ.

ಪಾಟ್ನಾದಲ್ಲಿ ನಡೆಯಲಿರುವ ಪುರಸಭೆ ಚುನಾವಣೆ ತಯಾರಿ ಬಗ್ಗೆ ಎಸ್ ಎಸ್ಪಿ ಮನು ಮಹಾಜನ್ ಸಭೆ ಕರೆದಿದ್ದರು. ಈ ವೇಳೆ ಮದ್ಯದ ವಿಚಾರದ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ನಿಷೇಧದ ನಂತ್ರ ಜಪ್ತಿಯಾದ ಮದ್ಯಗಳನ್ನು ಪೊಲೀಸ್ ಠಾಣೆ ಗೋದಾಮಿನಲ್ಲಿಡಲಾಗಿದೆ. ದಿನಕಳೆದಂತೆ ಗೋದಾಮಿನಲ್ಲಿರುವ ಮದ್ಯದ ಪ್ರಮಾಣ ಕಡಿಮೆಯಾಗ್ತಿದೆ ಇದಕ್ಕೆ ಕಾರಣವೇನು ಎಂದು ಕೇಳಿದ್ದಾರೆ ಮನು. ಇದಕ್ಕೆ ಬಹುತೇಕ ಎಲ್ಲ ಠಾಣೆ ಪೊಲೀಸರು ಇಲಿ ಮೇಲೆ ಆರೋಪ ಹೊರಿಸಿದ್ದಾರೆ. ಅಲ್ಲಿರುವ ಇಲಿಗಳು ಮದ್ಯ ಸೇವನೆ ಮಾಡ್ತಾ ಇವೆ ಎಂದಿದ್ದಾರೆ.

ಇದ್ರಿಂದ ಕೋಪಗೊಂಡ ಮನು ತಕ್ಷಣ ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶ ನೀಡಿದ್ದಾರೆ. ಹಾಗೆ ಪೊಲೀಸ್ ಸಿಬ್ಬಂದಿಗೆ ಆಲ್ಕೋಹಾಲ್ ಟೆಸ್ಟ್ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕೆಲ ಪೊಲೀಸ್ ಸಿಬ್ಬಂದಿ ಮದ್ಯವನ್ನು ಕಳ್ಳತನದಲ್ಲಿ ಮಾರಾಟ ಮಾಡ್ತಿದ್ದರೆ ಮತ್ತೆ ಕೆಲವರು ಮದ್ಯ ಸೇವನೆ ಮಾಡ್ತಿದ್ದಾರೆಂಬ ಸಂಶಯವಿದ್ದು, ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಮನು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...