alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಲ ಪಾವತಿಸದ ರೈತನ ಮೇಲೆ ಅಮಾನವೀಯ ವರ್ತನೆ

farmer 741

ಸಾಲ ಮಾಡಿ ಬೀಜ ಬಿತ್ತನೆ ಮಾಡಿದರೂ, ಮಳೆ ಅನಿಶ್ಚಿತತೆಯಿಂದ ಬೆಳೆ ಕೈಗೆ ಸಿಗುತ್ತದೆ ಎಂಬ ನಂಬಿಕೆ ಇರುವುದಿಲ್ಲ. ಅದರಲ್ಲಿಯೂ ಕಾಲಕಾಲಕ್ಕೆ ಮಳೆಯಾಗದೇ ಬೆಳೆದ ಬೆಳೆ ಕೈಗೆ ಸಿಗಲ್ಲ. ಬೆಳೆ ಬಂದರೂ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಗಲ್ಲ.

ಹಾಗಾಗಿ ರೈತರಿಗೆ ಸಕಾಲದಲ್ಲಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಹೀಗೆ ಸಕಾಲದಲ್ಲಿ ಸಾಲ ಮರು ಪಾವತಿ ಮಾಡದ ರೈತನೊಬ್ಬನನ್ನು ಪೊಲೀಸರು ಹಾಗೂ ಸಾಲ ವಸೂಲಾತಿ ಏಜೆಂಟರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಂಜಾವೂರಿನ ಸಮೀಪದ ಗ್ರಾಮವೊಂದರ ಬಾಲನ್ ಎಂಬ ರೈತ ಖಾಸಗಿ ಫೈನಾನ್ಸ್ ಒಂದರಲ್ಲಿ ಸಾಲ ಪಡೆದುಕೊಂಡಿದ್ದು, ಜಮೀನಿಗೆ ಬಳಸಿಕೊಂಡಿದ್ದ. ಆದರೆ, ಬೆಳೆ ಸರಿಯಾಗಿ ಬಾರದ ಕಾರಣ, ಸಕಾಲದಲ್ಲಿ ಸಾಲದ ಕಂತು ಕಟ್ಟಿರಲಿಲ್ಲ.

ಈಗಾಗಲೇ ಪಡೆದ ಸಾಲಕ್ಕಿಂತ ಅಧಿಕ ಹಣವನ್ನು ಬಾಲನ್ ಫೈನಾನ್ಸ್ ಗೆ ಕಟ್ಟಿದ್ದು, ಕೊನೆಯ ಕಂತುಗಳನ್ನು ಬಾಕಿ ಉಳಿಸಿಕೊಂಡಿದ್ದ. ಏಕಾಏಕಿ ಗ್ರಾಮಕ್ಕೆ ನುಗ್ಗಿದ ಪೊಲೀಸರು ಹಾಗೂ ಫೈನಾನ್ಸ್ ಏಜೆಂಟರು ಬಾಲನ್ ಗೆ ಥಳಿಸಿದ್ದಾರೆ. ಗ್ರಾಮಸ್ಥನೊಬ್ಬ ಈ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...