alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆಯಾಗಬೇಕಿದ್ದ ವಧುವನ್ನು ಪೊಲೀಸರು ಕರೆದೊಯ್ದರು…!

ದಿಬ್ಬಣ ಮದುವೆ ಮನೆ ಮುಂದೆ ಬಂದಿತ್ತು. ಇನ್ನೇನು ವರ ಮದುವೆ ಮಂಟಪಕ್ಕೆ ಬರಬೇಕು. ಅಷ್ಟರಲ್ಲಿ ಮದುವೆ ಮನೆ ಪ್ರವೇಶ ಮಾಡಿದ ಪೊಲೀಸರು ವಧುವನ್ನು ಠಾಣೆಗೆ ಕರೆದೊಯ್ದರು. ಸಂತೋಷದಿಂದಿದ್ದ ಮದುವೆ ಮನೆಯಲ್ಲಿ ಗೊಂದಲ ಸೃಷ್ಟಿಯಾಯ್ತು. ವರನ ಮನೆ ಬದಲು ವಧು ಪೊಲೀಸ್ ಠಾಣೆ ಸೇರಲು ಆಕೆ ಮಾಡಿದ ಎಡವಟ್ಟು ಕಾರಣವಾಯ್ತು.

ಘಟನೆ ಡೆಹ್ರಾಡೂನ್ ನಲ್ಲಿ ನಡೆದಿದೆ. ಮದುವೆಗೂ ನಾಲ್ಕು ತಿಂಗಳ ಮೊದಲೇ ವಧು ರಿಜಿಸ್ಟರ್ ಮ್ಯಾರೇಜ್ ಆಗಿದ್ದಳಂತೆ. ಎರಡು ವರ್ಷಗಳ ಹಿಂದೆ ಪ್ರೀತಿಸಿದ್ದ ದೀಪಕ್ ಎಂಬಾತನನ್ನು ವಧು ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದಳಂತೆ. ಈ ವಿಷ್ಯವನ್ನು ಇಬ್ಬರೂ ಮನೆಯವರಿಗೆ ಹೇಳಿರಲಿಲ್ಲ ಎನ್ನಲಾಗಿದೆ.

ನಂತ್ರ ವಧು ಇನ್ನೊಂದು ಮದುವೆಗೆ ಸಿದ್ಧಳಾಗಿದ್ದಾಳೆ. ಈ ವಿಷ್ಯ ತಿಳಿದ ದೀಪಕ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಮದುವೆಯಾದ ದಾಖಲೆ ನೀಡಿ ದೂರು ನೀಡಿದ್ದಾನೆ. ದೀಪಕ್ ಮದುವೆ ದಾಖಲೆ ಪತ್ರದ ಆಧಾರದ ಮೇಲೆ ಮದುವೆ ಮನೆಗೆ ಬಂದ ಪೊಲೀಸರು ಮದುವೆ ನಿಲ್ಲಿಸಿದ್ದಾರೆ. ವಧುವನ್ನು ಕಟ್ಟಿಹಾಕಿ ಮದುವೆ ಮಾಡಲಾಗಿದೆ ಎಂದು ದೀಪಕ್ ಆರೋಪ ಮಾಡಿದ್ದಾನೆ. ಆದ್ರೆ ವಧು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...