alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಯಲ್ ರೂಂನಲ್ಲಿ ಹುಡುಗಿ ಬಟ್ಟೆ ಬದಲಿಸುವಾಗ ವಿಡಿಯೋ ಮಾಡ್ತಿದ್ದ ಸಿಬ್ಬಂದಿ

ಕೆಲ ದೊಡ್ಡ ಮಾಲ್ ಗಳ ಟ್ರಯಲ್ ರೂಂ ಹುಡುಗಿಯರಿಗೆ ಸುರಕ್ಷಿತವಲ್ಲ. ಧರ್ಮ ನಗರಿ ಎಂದೇ ಕರೆಯಿಸಿಕೊಳ್ಳುವ ಕಾಶಿಯ ಮಾಲ್ ಒಂದರ ಟ್ರಯಲ್ ರೂಂನಲ್ಲಿ ಮೊಬೈಲ್ ವಿಡಿಯೋ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಘಟನೆ ಲಕ್ಸ್ ಠಾಣಾ ವ್ಯಾಪ್ತಿಯ ಎಂ ಬಜಾರ್ ನಲ್ಲಿ ನಡೆದಿದೆ. ಬುಧವಾರ ಟ್ರಯಲ್ ರೂಂನಲ್ಲಿ ಹುಡುಗಿ ವಿಡಿಯೋ ಮಾಡ್ತಿದ್ದ ಸಿಬ್ಬಂದಿಯೊಬ್ಬ ಎಲ್ಲರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹುಡುಗಿ ಸಹೋದರನ ದೂರಿನ ಮೇಲೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಬುಧವಾರ ಹುಡುಗಿ ಮಾಲ್ ನಲ್ಲಿ ಬಟ್ಟೆ ಖರೀದಿ ಮಾಡಿದ್ದಳಂತೆ. ಅದ್ರ ಪರೀಕ್ಷೆಗೆ ಟ್ರಯಲ್ ರೂಮಿಗೆ ಹೋಗಿದ್ದಾಳೆ. ಅಲ್ಲಿ ಮೊದಲೇ ಇದ್ದ ವ್ಯಕ್ತಿಯೊಬ್ಬ ವಿಡಿಯೋ ಮಾಡ್ತಿರುವುದು ಹುಡುಗಿಗೆ ತಿಳಿದಿದೆ. ಹುಡುಗಿ ಕಿರುಚಿಕೊಂಡಿದ್ದಾಳೆ. ಆಕೆ ಜೊತೆ ಬಂದವರು ವಿಡಿಯೋ ಮಾಡ್ತಿದ್ದ ಸಿಬ್ಬಂದಿಯನ್ನು ಹಿಡಿದು ಪೊಲೀಸರಿಗೆ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...