alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪಾದ್ರಿ

rape-victim-1

ದೇಶಾದ್ಯಂತ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು ಈ ನಡುವೆ ಸನ್ಮಾರ್ಗದ ಕುರಿತಾಗಿ ಬೋಧನೆ ಮಾಡಬೇಕಿದ್ದ ಪಾದ್ರಿಯೊಬ್ಬ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಹೇಯ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.

ಪೆರಂಬವೂರ್ ಬಳಿ ಇರುವ ವಲಯಾಚಿರಂಗರದಲ್ಲಿ ಮಲಂಕರ ಆರ್ಥಡಕ್ಸ್ ಸಿರಿಯಾನ್ ಚರ್ಚ್ ನಡೆಸುತ್ತಿರುವ ಬಾಲ ನಿವಾಸದ ಮ್ಯಾನೇಜರ್ ಆಗಿದ್ದ ಜಾನ್ ಫಿಲಿಪೋಸ್ ಎಂಬಾತ ಬಾಲ ನಿವಾಸದಲ್ಲಿದ್ದ ಅಪ್ರಾಪ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಅಲ್ಲದೇ ನೊಂದ ಬಾಲಕಿ ಕ್ರಿಶ್ಚಿಯನ್ ಪಾದ್ರಿ ನಡೆಸಿರುವ ಈ ಹೇಯ ಕೃತ್ಯದ ಕುರಿತಾಗಿ ತನ್ನ ಶಾಲೆಯ ಹೆಡ್ ಮಾಸ್ಟರ್ ಬಳಿ ಹೇಳಿಕೊಂಡಿದ್ದು, ತಕ್ಷಣ ಶಾಲಾ ಆಡಳಿತ ಮಂಡಳಿ ಮಕ್ಕಳ ಸಹಾಯವಾಣಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಈಗಾಗಲೇ ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕ ಪಾದ್ರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...