alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಪತಿ ಮುಂದೆ ತೋರಿದ್ಲು ಅಸಲಿ ರೂಪ

ಪಂಜಾಬ್ ನ ಲೂದಿಯಾನಾದಲ್ಲಿ ಮಹಿಳೆಯೊಬ್ಬಳ ವಿರುದ್ಧ ಪತಿ ಹತ್ಯೆಗೆ ಯತ್ನಿಸಿದ ದೂರು ದಾಖಲಾಗಿದೆ. ಮಹಿಳೆ ವಿದೇಶದಿಂದ ಬಂದ ಪತಿಗೆ ಆಹಾರದಲ್ಲಿ ವಿಷ ನೀಡಿದ್ದಾಳೆ. ಸಮಯಕ್ಕೆ ಸರಿಯಾಗಿ ಸಂಬಂಧಿಕರು ಮಹಿಳೆ ಪತಿಯನ್ನು ಆಸ್ಪತ್ರೆಗೆ ಸೇರಿಸಿದ್ದರಿಂದ ಆತ ಬದುಕುಳಿದಿದ್ದಾನೆ.

2002ರಲ್ಲಿ ಆರೋಪಿ ಮಹಿಳೆ ಮದುವೆ ನಡೆದಿತ್ತು. ಮದುವೆ ನಂತ್ರ ಪತಿ ಮಸ್ಕಟ್ ಗೆ ಹೋಗಿದ್ದ. ಆ ನಂತ್ರ ಪತ್ನಿ ಪಕ್ಕದ ಮನೆಯವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಬಗ್ಗೆ 2 ವರ್ಷಗಳ ಹಿಂದೆಯೇ ಪತಿಗೆ ತಿಳಿದಿತ್ತಂತೆ. ಪತ್ನಿಗೆ ಬುದ್ದಿ ಹೇಳುವ ಕೆಲಸ ಮಾಡಿದ್ದಾನೆ ಪತಿ.

ಪತಿ ಮಾತು ಕೇಳದ ಪತ್ನಿ ವಿದೇಶದಿಂದ ಬರ್ತಿದ್ದಂತೆ ನಿನಗೊಂದು ಗತಿ ಕಾಣಿಸುತ್ತೇನೆ ಎಂದಿದ್ದಳಂತೆ. ಪತಿ ವಿದೇಶದಿಂದ ಕಳುಹಿಸಿದ್ದ ಲಕ್ಷಾಂತರ ರೂಪಾಯಿಯನ್ನು ಪ್ರೇಮಿ ಜೊತೆ ಸೇರಿ ಹಾಳು ಮಾಡಿದ್ದಳಂತೆ. ಪತಿ ವಿದೇಶದಿಂದ ಬರ್ತಿದ್ದಂತೆ ಸಮಯ ನೋಡಿ ಆತನ ಆಹಾರಕ್ಕೆ ವಿಷ ಬೆರೆಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...