alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ರಮ ಕಟ್ಟಡ ನಿರ್ಮಾಣವನ್ನು ಸ್ವಯಂ ತೆರವುಗೊಳಿಸಲು ಮುಂದಾದ ಮೋದಿ ಸಹೋದರ

v

ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿ, ಅಕ್ರಮ ಕಟ್ಟಡ ನಿರ್ಮಾಣ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಅವರು ಅದನ್ನು ತೆರವುಗೊಳಿಸುವ ಮೂಲಕ ಸಕ್ರಮ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಅಹ್ಮದಾಬಾದ್ ನ ಹೆಚ್.ಬಿ. ಕಾಲೋನಿಯಲ್ಲಿ ವಾಣಿಜ್ಯ ಕಟ್ಟಡವನ್ನು ಮೋದಿ ಸಹೋದರ ಪ್ರಹ್ಲಾದ್‌ ಮೋದಿ ಹೊಂದಿದ್ದು, ಪ್ರಾಧಿಕಾರಕ್ಕೆ ದಂಡ ಕಟ್ಟುವ ಮೂಲಕ ಸಕ್ರಮ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದಲ್ಲದೆ ಕೆಲ ಜಾಗಗಳಲ್ಲಿ ಕಟ್ಟಲಾಗಿರುವ ಅಕ್ರಮ ಕಟ್ಟಡಗಳನ್ನು ತೆರವು ಮಾಡಲೂ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಮಂಗಳದೀಪ್‌ ಎಸ್ಟೇಟ್‌ನಲ್ಲಿನ 360 ಚದರ ಮೀಟರ್‌ನ ಮಳಿಗೆಯನ್ನು ಪ್ರಹ್ಲಾದ್ ಮೋದಿ ಹೊಂದಿದ್ದು, ಅವರು ಸೀಮೆಎಣ್ಣೆ ಮಾರಾಟ ಪರವಾನಗಿ ಅಸೋಸಿಯೇಷನ್‌ ನ ಅಧ್ಯಕ್ಷರಾಗಿದ್ದಾರೆ.

ವಾಣಿಜ್ಯ ಕಟ್ಟಡದ ಸಂಬಂಧ ಈಗಾಗಲೇ ಅಹಮದಾಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್‌ ನೋಟಿಸ್‌ ಜಾರಿ ಮಾಡಿದೆ. ವಾಣಿಜ್ಯ ಕಟ್ಟಡಕ್ಕೆ ಸ್ಥಳೀಯರಿಂದ ವಿರೋಧವೂ ವ್ಯಕ್ತವಾಗಿದೆ. ವಾಣಿಜ್ಯ ಕಟ್ಟಡ ನಿರ್ಮಾಣದ ವೇಳೆಯೇ ಕಟ್ಟಡ ಕಾಮಗಾರಿಗೆ ಸೂಕ್ತ ಪರವಾನಗಿ ಪಡೆದ ಬಳಿಕವೇ ಮುಂದುವರೆಸುವಂತೆ ಅಧಿಕಾರಿಗಳು ಸೂಚಿಸಿದ್ದರು. ಇದೀಗ ಅಧಿಕಾರಿಗಳು ಮೂರನೇ ಹಾಗೂ ಅಂತಿಮ ನೋಟಿಸ್‌ ಜಾರಿಗೊಳಿಸಿದ್ದಾರೆ.

ಆದರೆ ಯಾವುದೇ ನೋಟಿಸ್‌ಗೆ ಉತ್ತರ ಕೊಡದ ಹಿನ್ನೆಲೆಯಲ್ಲಿ ಅಧಿಕಾರಿಗಳು, ರಾಮೋಲ್‌ ಠಾಣೆಗೆ, ಕಟ್ಟಡ ತೆರವುಗೊಳಿಸುವ ಅಗತ್ಯ ಬಂದಲ್ಲಿ ಸೂಕ್ತ ಭದ್ರತೆ ನೀಡುವಂತೆ ಪತ್ರ ಬರೆದಿದ್ದಾರೆ. ಈಗ ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿರುವ ಪ್ರಹ್ಲಾದ್‌ ಮೋದಿ, ಕಟ್ಟಡದ ಕಾನೂನು ಬಾಹಿರವಾದ ಭಾಗವನ್ನು ತೆರವುಗೊಳಿಸಲು ತೀರ್ಮಾನಿಸಿದ್ದು, ಈ ಕುರಿತು ಕಾರ್ಪೊರೇಷನ್‌ಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಕಟ್ಟಡದ ಅಕ್ರಮ ಭಾಗಕ್ಕೆ ದಂಡ ಕಟ್ಟಿ ಸಕ್ರಮ ಮಾಡಿಕೊಳ್ಳಲು ಪ್ರಹ್ಲಾದ್‌ ಮುಂದಾಗಿದ್ದರು. ಆದರೆ ಇದು ಸಾಧ್ಯವಿಲ್ಲ ಎಂದು ಅವರಿಗೆ ಮನವರಿಕೆ ಮಾಡಿಕೊಡಲಾಗಿದ್ದು, ಇದೀಗ ಅಕ್ರಮ ಭಾಗವನ್ನು ಅವರೇ ತೆರವುಗೊಳಿಸಲು ಮುಂದಾಗಿದ್ದಾರೆ ಎಂದು ಡೆಪ್ಯುಟಿ ಕಮೀಷನರ್ ಕುಲ್‌ದೀಪ್‌ ಆರ್ಯ ಹೇಳಿದ್ದಾರೆ.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...