alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಕ್ಲಾಸ್…!

ಗುರುವಾರದಂದು ನವದೆಹಲಿಯಲ್ಲಿ ನಡೆದ ಬಿ.ಜೆ.ಪಿ. ಸಂಸದರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಸದರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ತಾವು ಕಳುಹಿಸಿದ ಗುಡ್ ಮಾರ್ನಿಂಗ್ ಮೆಸೇಜ್ ಸೇರಿದಂತೆ ಹಲವು ಸಂದೇಶಗಳನ್ನು ಬಹಳಷ್ಟು ಸಂಸದರು ಗಮನಿಸುತ್ತಿಲ್ಲವೆಂಬುದನ್ನು ಸಭೆಯಲ್ಲಿ ಪ್ರಸ್ತಾಪಿಸಿದ ನರೇಂದ್ರ ಮೋದಿಯವರು, ಕೇಂದ್ರ ಸರ್ಕಾರದ ಸಾಧನೆಗಳ ಮಾಹಿತಿ ನೀಡುತ್ತಿರುವ ನರೇಂದ್ರ ಮೋದಿ ಆ್ಯಪ್ ಬಳಸಿಕೊಳ್ಳಲು ಸೂಚಿಸಿದರೆಂದು ತಿಳಿದು ಬಂದಿದೆ.

ಜೂನ್ 17, 2015 ರಂದು ನರೇಂದ್ರ ಮೋದಿ ಆ್ಯಪ್ ಬಿಡುಗಡೆ ಮಾಡಲಾಗಿದ್ದು, ಕೆಲ ಬಿ.ಜೆ.ಪಿ ಸಂಸದರು  ಇದನ್ನು ಡೌನ್ ಲೋಡ್ ಮಾಡಿಕೊಂಡು ಫಾಲೋ ಮಾಡುವ ಗೋಜಿಗೆ ಹೋಗಿಲ್ಲವೆನ್ನಲಾಗಿದೆ.

ಈ ಹಿಂದೆಯೂ ಕೆಲ ಬಿಜೆಪಿ ಸಂಸದರ ವರ್ತನೆ ಕುರಿತು ಮೋದಿಯವರು ಕ್ಲಾಸ್ ತೆಗೆದುಕೊಂಡಿದ್ದು, ಸಂಸತ್ ಕಲಾಪಕ್ಕೆ ಸಕ್ರಿಯವಾಗಿ ಹಾಜರಾಗದಿದ್ದರೆ ಮುಂಬರುವ ಚುನಾವಣೆಯಲ್ಲಿ ಟಿಕೇಟ್ ನೀಡಲಾಗುವುದಿಲ್ಲವೆಂದು ಎಚ್ಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...