alex Certify
ಕನ್ನಡ ದುನಿಯಾ       Mobile App
       

Kannada Duniya

ಕುಸಿದಿದೆಯಾ ಪ್ರಧಾನಿ ಮೋದಿಯವರ ಜನಪ್ರಿಯತೆ…?

ಸಮೀಕ್ಷೆಯೊಂದು ಬಿಚ್ಚಿಟ್ಟಿರುವ ಸಂಗತಿ ಕುತೂಹಲಕಾರಿಯಾಗಿದೆ. ಪ್ರಧಾನಿ ಸ್ಥಾನದಲ್ಲಿರುವ ಮೋದಿಯವರು ದೇಶವನ್ನಾಳಿದ ಇತರೆ ಪ್ರಧಾನಿಗಳಿಗೆ ಹೋಲಿಸಿದರೆ ಜನಪ್ರಿಯರಾಗಿದ್ದರೂ ಅವರ ಒಟ್ಟಾರೆ ಜನಪ್ರಿಯತೆ ಕಡಿಮೆಯಾಗಿರುವುದು ಸಮೀಕ್ಷೆಯಲ್ಲಿ ಕಂಡು ಬಂದಿದೆ.

ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಕಳೆದ 5 ತಿಂಗಳಲ್ಲಿ ಶೇ.4 ರಷ್ಟು ಇಳಿಮುಖವಾಗಿದ್ದು, ಬಿಜೆಪಿ ನಾಯಕತ್ವ ಸೇರಿ ಮೋದಿಯವರು ಚಿಂತಿಸಬೇಕಾದ ಸಂದರ್ಭ ಎದುರಾಗಿದೆ.

‘ಇಂಡಿಯಾ ಟುಡೇ’ ನಡೆಸಿದ ಮೂಡ್ ಆಫ್ ನೇಷನ್ ಸಮೀಕ್ಷೆಯಂತೆ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಜನವರಿಯಲ್ಲಿ ಶೇ.53 ರಷ್ಟು ಇದ್ದು, ಜುಲೈನಲ್ಲಿ ಶೇ.49 ಕ್ಕೆ ಇಳಿಕೆಯಾಗಿದೆ. ಅತಿ ಕಡಿಮೆ ಅವಧಿಯಲ್ಲಿ ಶೇ.4 ರಷ್ಟು ಜನಪ್ರಿಯತೆ ಕಡಿಮೆ ಆಗಿರುವುದು ಬಿಜೆಪಿ ಚಿಂತೆಗೀಡು ಮಾಡುವ ವಿಚಾರ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಲೋಕಸಭೆ ಚುನಾವಣೆಗಾಗಿ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಘೋಷಣೆಯೊಂದಿಗೆ ಬಿಜೆಪಿಯು ಸ್ವಿಂಗ್ ನಲ್ಲಿ ಚುನಾವಣೆ ತಯಾರಿ ಮಾಡಿಕೊಂಡಿತ್ತು. ಹಾಗೆಯೇ ಮುಂದಿನ ಚುನಾವಣೆಯಲ್ಲಿ ನರೇಂದ್ರ ಮೋದಿ ಅಜೇಯ ಎಂದು ವಿಶ್ಲೇಷಿಸುತ್ತಿದ್ದಾಗಲೇ ಇಂಥದ್ದೊಂದು ಜನಾಭಿಪ್ರಾಯ ಹೊರಬಿದ್ದಿದೆ.

ಕಪ್ಪು ಹಣದ ವಿರುದ್ಧ ಯುದ್ಧ ಸಾರಲು ಮೋದಿಯವರು 2016 ರ ನವೆಂಬರ್ 8 ರಂದು 500 ರೂ. ಮತ್ತು 1 ಸಾವಿರ ರೂ. ನೋಟು ನಿಷೇಧ ಮಾಡಿ ಮಹತ್ವದ ತೀರ್ಮಾನ ಕೈಗೊಂಡಿದ್ದರು. 1960 ರಲ್ಲಿ ಇಂದಿರಾಗಾಂಧಿಯವರು ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದಾಗಿನ ನಿರ್ಧಾರದ ನಂತರ ಹಣಕಾಸಿನ ನೀತಿಯಲ್ಲಿ ನೋಟು ಅಮಾನ್ಯ ವಿಚಾರ ಮಹತ್ವವಾಗಿ ಕಾಣಿಸಿತ್ತು. ಈ ತೀರ್ಮಾನ ಮಾಡಿದಾಗ ಮೋದಿಯವರ ಜನಪ್ರಿಯತೆ ಶೇ.65 ರಷ್ಟು ಮುಟ್ಟಿತ್ತು. ಇದು ಸರ್ವಕಾಲಿಕವಾಗಿತ್ತೆಂದು ಅನೇಕರು ಭಾವಿಸಿದ್ದರು.

2017 ರ ಜನವರಿಯಲ್ಲಿ ಶೇ.65 ರಷ್ಟಿದ್ದ ಮೋದಿ ಜನಪ್ರಿಯತೆ 2018 ರ ಜುಲೈನಲ್ಲಿ ಶೇ.49 ಕ್ಕೆ ಇಳಿದಿದೆ. ಇದನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಲಾಭ ಎಂದು ಪರಿಗಣಿಸಲೂಬಾರದು ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ. ಆದರೂ ಈ ಬೆಳವಣಿಗೆ ಕಾಂಗ್ರೆಸ್‌ಗೆ ಸಂತೋಷವಾಗಬಹುದು ಎಂದು ಹೇಳಲಾಗುತ್ತಿದೆ.

2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಯುಪಿಎ, ಬಿಎಸ್ಪಿ-ಎಸ್ಪಿಯೊಂದಿಗೆ ಮೈತ್ರಿಕೂಟ ಮಾಡಿಕೊಂಡು ಕಣಕ್ಕಿಳಿದರೆ ಒಟ್ಟಾರೆ ಶೇ.41 ರಷ್ಟು ಮತ ಪಡೆಯಬಹುದೆಂದು ನೇಷನ್ ಸಮೀಕ್ಷೆಯ ಭವಿಷ್ಯ ನುಡಿದಿದೆ. ಇದೇ ವೇಳೆ ಎನ್ಡಿಎ ಮತ ಗಳಿಕೆ ಶೇ.37 ಆಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಯುಪಿಎ 2014 ರಲ್ಲಿದ್ದಂತೆ ತನ್ನ ಹಳೆಯ ಸಂಗಾತಿಗಳೊಂದಿಗೆ ಕಣಕ್ಕಿಳಿದರೆ ಮತ ಪ್ರಮಾಣ ಶೇ.31 ಮುಟ್ಟಬಹುದೆಂದು ಅಂದಾಜಿಸಲಾಗಿದೆ. ಇನ್ನು ಡಿಸೆಂಬರ್ 2017ರ ನಂತರ ಚುನಾವಣೆಯಲ್ಲಿ ನಡೆದ ಮತದಾನವನ್ನು ಗಮನಿಸಿದರೆ ಬಿಎಸ್ಪಿ, ಎಸ್ಪಿಯಿಂದ ಯುಪಿಎಗೆ ಲಾಭವಾಗಿ ಶೇ.45.3 ರಷ್ಟು ಮತವನ್ನು ಸುಲಭವಾಗಿ ಪಡೆದುಕೊಳ್ಳುತ್ತದೆ ಎಂಬ ಲೆಕ್ಕಾಚಾರವೂ ಇದೆ.

ಇಂಡಿಯಾ ಟುಡೆ ಅವರ ಇತ್ತೀಚಿನ ಮೂಡ್ ಆಫ್ ನೇಷನ್ ಸಮೀಕ್ಷೆ ಪ್ರಕಾರ ಯುಪಿಎ, ಎಸ್ಪಿ, ಬಿಎಸ್ಪಿ ಮತ್ತು ಟಿಎಂಸಿ 41 ಪ್ರತಿ ಶತ ಮತ ಪಡೆಯಲಿದ್ದು, ಎನ್ಡಿಎ 36 ಪ್ರತಿಶತ ಮತ ಪಡೆಯಬಹುದೆಂಬ ಅಂದಾಜಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...